ಪರಿಸರ

ಕಸ್ತೂರಿರಂಗನ್ ವರದಿ, ಸಿ & ಡಿ ಭೂಮಿ ವಿವಾದದಿಂದ ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆ

ಸೋಮವಾರಪೇಟೆ, ಜ 12: ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ಕಡೆಗಣನೆ ಬೇಡ ಎಂದು ತುಮಕೂರು ಸಿದ್ದಗಂಗಾ ಮಠಾದ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೋಕಿನ ಆಲೂರು ಸಿದ್ದಾಪುರದ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರುಪಾಕ್ಷಪ್ಪ ನವರ ಮನೆಯ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು.
ಕಸ್ತೂರಿರಂಗನ್ ವರದಿ ಹಾಗೂ ಸಿ ಅಂಡ್ ಡಿ ಭೂಮಿ ವಿವಾದದಿಂದ ಇಲ್ಲಿನ ರೈತರು ಹಾಗೂ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಡಿಸಿದರು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು,ಒಂದೆಡೆ ಪ್ರಕೃತಿ ಉಳಿಯಬೇಕು ನಿಜ ಇದರಲ್ಲಿ ರೈತರ ಪಾತ್ರವೂ ಬಹಳ ಮುಖ್ಯವಾದದ್ದು ಅವರು ಸಾಕಷ್ಟು ಗಿಡಮರಬೆಳೆಸ್ತಾರೆ,
ರೈತರಿಗೆ ತೊಂದರೆ ಆಗಬಾರದು ಸರ್ಕಾರ ಪಶ್ಚಿಮ ಘಟ್ಟ ಹಾಗು ರೈತರನ್ನೂ ಸಮರೀತಿಯಲ್ಲಿ ಕಾಣುವುದರೊಂದಿಗೆ ಸಮನ್ವಯ ಕ್ರಮ ಅನುಸರಿಸಬೇಕೆಂದರು.
ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ ಕೆಲವು ಕಠಿಣ ಕ್ರಮಗಳಿಂದ ಇಂತಹವರಿಗೆ ತೊಂದರೆ ಆಗುತ್ತದೆ ಎಂದು ರಾಜ್ಯ ಸರ್ಕಾರದ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!