ಪರಿಸರ

ಗುಂಡುರಾವ್ ಬಡಾವಣೆ ಮೈದಾನ ಸ್ವಚ್ಚಗೊಳಿಸಿದ‌ ಕ್ರೀಡಾಪಟುಗಳು

ಕುಶಾಲನಗರ, ಜ 03: ಕುಶಾಲನಗರದ ಟೀಮ್ ಡಿಫೆಂಡರ್ ಕ್ರಿಕೆಟ್ ತಂಡ ಮತ್ತು ಪುರಸಭೆ ವತಿಯಿಂದ ಗುಂಡು ರಾವ್ ಬಡಾವಣೆ ಕ್ರೀಡಾಂಗಣವನ್ನು ಶುಚಿತ್ವ ಗೊಳಿಸಲಾಯಿತು. ಜಾತ್ರೋತ್ಸವ ಬಳಿಕ ತ್ಯಾಜ್ಯಮಯವಾಗಿದ್ದ ಮೈದಾನದಲ್ಲಿ ಒಡಾಡಲು ಅನಾನುಕೂಲ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಮೈದಾನದಲ್ಲಿ ಹರಡಿದ್ದ ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದರು. ಈ ಸಂದರ್ಭ ಗುಂಡುರಾವ್ ಕ್ರೀಡಾಂಗಣ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಗೂ ಟೀಮ್ ಡಿಫೆಂಡರ್ಸ್ ತಂಡದ ನಾಯಕ ಸಚಿನ್, ಯತೀಶ್, ಸುರೇಂದ್ರ, ಮಧು, ಚಂದ್ರು, ವೇಣು, ಶಿವು, ಅರುಣ್, ಗಣೇಶ್, ಪ್ರಮೋದ್, ಶಮಿ, ದರ್ಶನ್ ಮತ್ತು ಇತರ ಆಟಗಾರರು ಗುಂಡರಾವ್ ಕ್ರೀಡಾಂಗಣವನ್ನು ಶುಚಿತ್ವ ಗೊಳಿಸುವಲ್ಲಿ ಶ್ರಮ ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!