ಕುಶಾಲನಗರ ಜ.08: ಯುವ ಸಮುದಾಯ ದುಶ್ಚಟ, ಅನೈತಿಕ ಚಟುವಟಿಕೆಗಳಿಂದ ದೂರವಿರಿಸಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರ ಅಗತ್ಯತೆ ಇತ್ತೀಚಿಗೆ ತೀರ ಹೆಚ್ಚಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ನ ಜಿಲ್ಲಾ ಚೇರಮನ್ ವೈಶಾಲಿ ಕುಡ್ವಾ ಕರೆ ನೀಡಿದರು.
ಕುಶಾಲನಗರದ ಇನ್ನರ್ ವೀಲ್ ಕ್ಲಬ್ ಗೆ ಮಂಗಳವಾರ ಅಧಿಕೃತ ಬೇಟಿ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷವಾದ ಸ್ಥಾನದಲ್ಲಿ ನಿಲ್ಲುತ್ತದೆ. ಇನ್ನರ್ ವೀಲ್ ಕ್ಲಬ್ ಸದಸ್ಯರು ಸಮಾಜದಲ್ಲಿ ಅದ್ಬುತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಹೆಮ್ಮೆಪಟ್ಟರು.
ಯಾವುದೇ ಸೇವೆ ಮಾಡಿದರು ಕನಿಷ್ಠ 20 ವರ್ಷಗಳು ನೆನಪಿನಲ್ಲಿ ಇರುವ ಹಾಗೆ ಇರಬೇಕು. ಆ ಸೇವೆಯಿಂದ ನಮಗೆ ಮೊದಲು ಸಂತೃಪ್ತಿ ಸಿಗಬೇಕು. ಅನಂತರ ಖಂಡಿತ ಬೇರೆಯರಿಗೂ ಸ್ಪೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನಮ್ಮ ಅವಶ್ಯವಿರುತ್ತೆ. ಅವುಗಳಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಆಗುವುದಿಲ್ಲ. ಅವುಗಳ ಸಂಕಷ್ಟವನ್ನು ಅರಿತು ಮುನ್ನಡೆಯಬೇಕು ಎಂದು ತಿಳಿಸಿದರು.
ಕುಶಾಲನಗರ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಮಾತನಾಡಿ, ನಮ್ಮ ಕ್ಲಬ್ ನಿಂದ ಈಗಾಗಲೇ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮ ಹಿರಿಯರು ಅಚ್ಚುಕಟ್ಟಾದ ಬದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನೆಲ್ಲ ನಮ್ಮ ಅವಧಿಯಲ್ಲಿ ಮಾಡಿಕೊಂಡು ಬಂದಿದ್ದೇವೆ. ಜಿಲ್ಲಾ ಚೇರ್ ಪರ್ಸನ್ ಹೇಳುವ ಹಾಗೆ ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಸದ್ಯದಲ್ಲೇ ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಅಂತರರಾಷ್ಟ್ರೀಯ ಬ್ಯಾಂಡಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುವ ತನುಷ್ಕ ಮತ್ತು ಅಂತರರಾಷ್ಟ್ರೀಯ ಸೈನ್ಸ್ ಒಲಂಪಿಯಡ್ ನಲ್ಲಿ 617 ರ್ಯಾಂಕ್ ಪಡೆದ ಶಾರವರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕುಶಾಲನಗರ ಕ್ಲಬ್ ನ ಉಪಾಧ್ಯಕ್ಷೆ ರೇಷ್ಮಾ ನವೀನ್, ಕಾರ್ಯದರ್ಶಿ ಸೀತಾಲಕ್ಷ್ಮಿ, ಖಜಾಂಚಿ ಜಾಸ್ಮಿನ್, ಎಡಿಟರ್ ಭಾರತಿ, ಮಾಜಿ ಅಧ್ಯಕ್ಷೆಯರಾದ ಸುನೀತಾ, ರೇಖಾ ಗಂಗಾಧರ್, ನೇಹಾ ಜಗದೀಶ್, ಕವಿತಾ ಸಾತಪ್ಪನ್, ನಿರ್ದೇಶಕಿಯರಾದ ಅಶ್ವಿನಿ ರವಿಕುಮಾರ್, ಸಂಧ್ಯಾ ಪ್ರಮೋದ್, ಪೂರ್ಣಿಮಾ ರಾಜೀವ್, ಶಾಲಿನಿ ನರೇಂದ್ರ, ಸುಪ್ರೀತಾ ಇತರರು ಹಾಜರಿದ್ದರು.
Back to top button
error: Content is protected !!