ಪ್ರತಿಭೆ

ನಾಟ್ಯ ನಿಕೇತನ ಸಂಗೀತ, ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕುಶಾಲನಗರ, ಜ 08: ಕರ್ನಾಟಕ ರಾಜ್ಯ ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ, ಮೈಸೂರು ಇವರ ವತಿಯಿಂದ ನಡೆದ ಸಂಗೀತ, ನೃತ್ಯ ಹಾಗೂ ತಾಳವಾದ್ಯ 2024 ನೇ ಸಾಲಿನ ಜೂನಿಯರ್ ಭರತನಾಟ್ಯ ನೃತ್ಯ ಪರೀಕ್ಷೆಯಲ್ಲಿ ಮಡಿಕೇರಿ ಮತ್ತು ಕುಶಾಲನಗರದ ನಾಟ್ಯ ನಿಕೇತನ ಸಂಗೀತ, ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಗಾನವಿ, ಶ್ರೀವರ್ಧನ್, ಕಾವೇರಿ ಮನೋಜ್, ಸಮೀಕ್ಷಾ, ಪುಣ್ಯ ಶ್ರೀ, ಇಶಾ, ಯಶಸ್ವಿನಿ ರವರು ಅತ್ಯುನ್ನತ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಹಾಗೆಯೇ ಹಲವಾರು ವರ್ಷಗಳಿಂದ ಈ ಸಂಸ್ಥೆಯೂ ಜೂನಿಯರ್, ಸೀನಿಯರ್ ನೃತ್ಯ ಪರೀಕ್ಷೆಯಲ್ಲಿ ಶೇಕಡಾ 100.ರಷ್ಟು ಫಲಿತಾಂಶವನ್ನು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಬಂದಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರು ವಿನಯ್ ಬಿ. ಎಸ್.ಹಾಗೂ ನೃತ್ಯ ಗುರುಗಳಾದ ವಿದೂಷಿ ಪೂರ್ಣಿಮಾ ವಿನಯ್ ತಿಳಿಸಿದ್ದಾರೆ.

ಈ ಸಾಲಿನ ನೃತ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!