ಕುಶಾಲನಗರ, ಜ 01: ನಂ 568ನೇ ಕುಶಾಲನಗರದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಆಚರಿಸಲಾಯಿತು.
ಸಂಘದ ಕಛೇರಿ ಮುಂಭಾಗದಲ್ಲಿ ಸಂಘದ ಅಧ್ಯಕ್ಷ ಶಾಂಭಶಿವಮೂರ್ತಿ ಸಹಕಾರ ಧ್ವಜಾರೋಹಣ ನೆರವೇರಿಸಿದರು.
ಸೌಹಾರ್ದ ಸಹಕಾರಿ ರಂಗದ ಬೆಳ್ಳಿಹಬ್ಬ ಅಂಗವಾಗಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಧ್ವಜಾರೋಹಣ ಮೂಲಕ ಸಹಕಾರಿ ರಂಗದ ಪ್ರಗತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭ ಸಂಘದ ಕಛೇರಿ ಸಭಾಂಗಣದಲ್ಲಿ ಸಂಘದಿಂದ ಹೊರತಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್
ನಿರ್ದೇಶಕರಾದ ಹೆಚ್.ವಿ.ಶಿವಪ್ಪ, ಯು.ಎಂ.ಬಸವರಾಜು, ಹೆಚ್.ಎಸ್.ಪುಟ್ಟರಾಜು, ಕೆ.ಡಿ.ಪ್ರಶಾಂತ್, ಬಿ.ಎಸ್.ಯಶೋಧ, ಎ.ಆರ್.ಮಮತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಬಸವಣ್ಣಯ್ಯ
ಆಡಿಟರ್ ಚಂದ್ರಶೇಖರ್ ಇದ್ದರು.
Back to top button
error: Content is protected !!