ಕುಶಾಲನಗರ, ಡಿ 31: ಆಹಾರ ನಾಗರಿಕ ಸರಬರಾಜು ಇಲಾಖೆಯ ಮೂಲಕ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಜೇನುಕುರುಬ ಕುಟುಂಬದ ಸದಸ್ಯರಗಳಿಗೆ ಪಡಿತರ ಚೀಟಿ ವಿತರಣೆ ಮಾಡುವ ಉದ್ದೇಶದಿಂದ ಪಡಿತರ ಚೀಟಿ ರಹಿತ ಕುಟುಂಬದ ಸದಸ್ಯರ ನೊಂದಣಿ ಕಾರ್ಯಕ್ರಮ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಮತ್ತು ಹಾಡಿಯ ಮುಖ್ಯ ಕೇಂದ್ರಗಳಲ್ಲಿ ಆರಂಭಗೊಂಡಿದೆ.
ಕುಶಾಲನಗರ ತಾಲ್ಲೂಕು ಅಹಾರ ನಿರೀಕ್ಷಣಾಧಿಕಾರಿ ಸ್ವಾತಿ ನೇತ್ರತ್ವದಲ್ಲಿ ಕೂಡಿಗೆ, ಕೂಡುಮಂಗಳೂರು, ಗುಡ್ಡೆಹೊಸೂರು, ಹೆಬ್ಬಾಲೆ ಗ್ರಾಮ ಪಂಚಾಯಿತಿ ಸೇರಿದಂತೆ ಉಪ ಗ್ರಾಮಗಳಲ್ಲಿ ಇರುವ ಜೇನುಕುರುಬ ಕುಟುಂಬದವರ ಹಾಡಿಗಳಿಗೆ ತೆರಳಿ ಪಡಿತರ ಚೀಟಿಯ ನೊಂದಣಿ ಕಾರ್ಯವು ಭರದಿಂದ ನಡೆಸಲಾಗುತ್ತಿದೆ.
ಪಡಿತರ ಚೀಟಿಯ ನೊಂದಣಿ ಕಾರ್ಯದಲ್ಲಿ ನೂರಾರು ಜೇನು ಕುರುಬ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!