ಸೋಮವಾರಪೇಟೆ, ಡಿ 19: ಮಠ ಮಾನ್ಯಗಳಿಂದ ಮಾತ್ರ ಈ ದೇಶದ ಸಂಸ್ಕೃತಿ,ಆಚಾರ ವಿಚಾರ ಉಳಿಯಲು ಸಾಧ್ಯವೆಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಅವರು ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೇಹಳ್ಳಿ ಮಠದಲ್ಲಿ ಆಯೋಜಿಸಲಾಗಿದ್ದ ಹದಿಮೂರನೇ ವರ್ಷದ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಠದ ದಿನದರ್ಶಿ(ಕ್ಯಾಲೆಂಡರ್) ಬಿಡುಗಡೆಗೊಳಿಸಿ ಮಾತನಾಡಿದರು.
ಈ ದೇಶಕ್ಕೆ ತನ್ನದೇ ಆದ ಇತಿಹಾಸ ಹಾಗೂ ಸಂಸ್ಕೃತಿ ಇದೆ ಅದನ್ನು ಉಳಿಸಿ,ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಆದರೆ ದುರ್ದೈವ ನಮ್ಮ ಯುವಜನಾಂಗ ಇದರ ಅರಿವಿಲ್ಲದೆ ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದಿಸಿದ ಅವರು ಈ ಕಾರ್ಯ ಮಠ ಮ್ಯಾನ್ಯಗಳಿಂದ ಮಾತ್ರ ಸಾಧ್ಯವೆಂದರು.
ಊರಿಗೆ ಒಂದು ದೇವಾಲಯ ಹಾಗೂ ಶಾಲೆ ಇರಬೇಕು ಆಗ ಊರು ಶಾಂತಿ ನೆಮ್ಮದಿಯಿಂದ ಇರುತದೆ ಆದರೆ ಇಂದು ಊರಿಗೆ ಒಂದು ಪೊಲೀಸ್ ಠಾಣೆ ಇರುವಂತಾಗಿದೆ ಎಂದರು.
ದೀಪೋತ್ಸವಕೆ ಚಾಲನೆ ನೀಡಿದ ಅರಮೇರಿ ಕಲಂಚೇರಿ ಮಠದ ಶ್ರೀ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ
ಇಂದು ಆಧುನಿಕತೆ ಬೆಳೆದಂತೆ ಮನುಷ್ಯನ ಜಂಜಾಟಗಳು ಹೆಚ್ಚುತ್ತಿರುವುದರಿಂದ ಜನ ಆದ್ಯಾತ್ಮದೆಡೆಗೆ ವಾಲುತಿರುವುದು ಸಂತೋಷದ ವಿಚಾರವೆಂದರು.
ಜ್ಯೋತಿ ಜ್ಞಾನದ ಸಂಕೇತ,ಕತ್ತಲನ್ನು ತೊಡೆದು ಬೆಳಕಿನೆಡೆಗೆ ಕರೆದೊಯ್ಯುವ ದ್ಯೋತಕವೆಂದರು.
ಭಗವಂತನನ್ನು ಆರಾಧಿಸಿ,ಧ್ಯಾನಿಸಿ ಜೀವನದಲ್ಲಿ ನೆಮ್ಮದಿ ಕಾಣಿರಿ ಎಂದರು.
ಮನೆ ಹಳ್ಳಿ ಮಠದ ಶ್ರೀ .ಮಹಾಂತ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಕೊಡ್ಲಿಪೇಟೆ ಕಲ್ಲು ಮಠದ ಶ್ರೀ.ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ, ಬಸವಾಪಟ್ಟಣ ಶ್ರೀ.ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕೇಸವತ್ತೂರು ಮಠದ ಶ್ರೀ .ಬಸವರಾಜೇಂದ್ರ ಸ್ವಾಮೀಜಿ,ಹಾಸನ ಜವೇನಹಳ್ಳಿ ಮಠದ ಶ್ರೀ.ಸಂಗಮೇಶ್ವರ ಸ್ವಾಮೀಜಿ,
ಶಿಡಿಗಳಲೇ ಮಠದ ಶ್ರೀ.ಇಮ್ಮಡಿ ಶಿವಲಿಂಗ ಸ್ವಾಮೀಜಿ, ತೂರೇನೂರು ಮಠದ ಶ್ರೀ.ಮಲ್ಲೇಶ ಸ್ವಾಮೀಜಿ,ಶಿರದನ ಹಳ್ಳಿ ಮಠದ ಶ್ರೀ.ಸದಾಶಿವ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಶ್ರೀ.ಜಯದೇವ ಸ್ವಾಮೀಜಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು.ನ್ಯಾಯಾಧೀಶರಾದ ಶ್ರೀಮತಿ.ಜಯಶ್ರೀ ಹಾಗು ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.ಮಠದ ಟ್ರಸ್ಟ್ ಸದಸ್ಯರಾದ ಪ್ರಕಾಶ್ ಸ್ವಾಗತಿಸಿ,ಚಂದ್ರಕಾಂತ್ ವಂದಿಸಿದರು.
Back to top button
error: Content is protected !!