ಕುಶಾಲನಗರ, ಮೇ 15 : ಇದೆ ತಿಂಗಳು 19 ರಂದು ಗುಜರಾತ್ ನಲ್ಲಿ ನಡೆಯಲ್ಲಿರುವ ರಾಷ್ಟ್ರ ಮಟ್ಟದ ಬೀಚ್ ಖೇಲೋ ಇಂಡಿಯಾ ಕಬ್ಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡಕ್ಕೆ ಪುರುಷ ಮತ್ತು ಮಹಿಳೆ ಆಟಗಾರರನ್ನು ಕರ್ನಾಟಕ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಬೆಂಗಳೂರು ಇವರ ವತಿಯಿಂದ ,ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಪುರುಷ ಹಾಗೂ ಮಹಿಳಾ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಗುರುವಾರ ಕುಶಾಲನಗರದ ಜಿ.ಎಂ.ಪಿ ಶಾಲೆ ಮೈದಾನದಲ್ಲಿ ಭಾರತ ಕಬ್ಬಡ್ಡಿ ತಂಡದ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ , ಬೆಂಗಳೂರು ಬುಲ್ಸ್ ತಂಡದ ತರಬೇತುದಾರ ಬಿ.ಸಿ.ರಮೇಶ್ .ಮತ್ತು ಅಂತರರಾಷ್ಟ್ರೀಯ ಕಬ್ಬಡ್ಡಿ ಆಟಗಾರ ,ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ,ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಸಿ.ಸುರೇಶ್ ಹಾಗೂ ಅಂತರಾಷ್ಟ್ರೀಯ ಕಬ್ಬಡ್ಡಿ ಆಟಗಾರ ಮಹೇಶ್ ಬಿ.ಎಂ.ದೈಹಿಕ ಶಿಕ್ಷಕ ಹೆಚ್.ಎಸ್.ಉತ್ತಪ್ಪ ನಡೆಸಿದರು ಈ ಸಂದರ್ಭದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಬಿ.ಸಿ.ರಮೇಶ್ ಕೊಡಗಿಗೂ ನಮಗೂ ಅವಿನಾಭಾವ ಸಂಬಂಧವಿದೆ ಪ್ರೋ ಕಬ್ಬಡ್ಡಿ ತಂಡಕ್ಕೆ ಕೊಡಗಿನಿಂದ ಕೆಲವು ಆಟಗಾರರಿಗೆ ಅವಕಾಶ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಟಗಾರರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ .ಇದೇ ತಿಂಗಳು 19 ರಂದು ಗುಜರಾತ್ ನಲ್ಲಿ ನಡೆಯಲ್ಲಿರುವ ಬೀಚ್ ಖೇಲೋ ಇಂಡಿಯಾ ಕಬ್ಬಡ್ಡಿ ಕರ್ನಾಟಕ ತಂಡಕ್ಕೆ 85 ಕೆ.ಜಿ.ಪುರುಷರ ವಿಭಾಗಕ್ಕೆ 6 ಆಟಗಾರರನ್ನು ಹಾಗೂ 75 ಕೆ ಜಿ.ಮಹಿಳಾ ವಿಭಾಗಕ್ಕೆ 6 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಆಟಗಾರರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೆದ್ದು ಬರಲಿ ಎಂದು ಶುಭ ಹಾರೈಸಿದರು.
Back to top button
error: Content is protected !!