ಕುಶಾಲನಗರ, ಡಿ 15: ಕುಶಾಲನಗರ ಗೌಡ ಸಮಾಜದ ವತಿಯಿಂದ ಸಂಭ್ರಮದ ಹುತ್ತರಿ ಹಬ್ಬ ಆಚರಣೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಕಾರ್ಯಕ್ರಮ ನಡೆಯಿತು.
ಗೌಡ ಸಮಾಜ, ಗೌಡ ಯುವಕ ಸಂಘ ಗೌಡ ಮಹಿಳಾ ಸ್ವಸಹಾಯ ಸಂಘ, ನಿವೃತ್ತ ಗೌಡ ಸೈನಿಕರ ಒಕ್ಕೂಟ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ನಡೆದ ಹುತ್ತರಿ ಆಚರಣೆ ಅಂಗವಾಗಿ ಸಂಪ್ರದಾಯದಂತೆ ಸಮಾಜದ ಪ್ರಮುಖರು, ಸದಸ್ಯರು
ಸಂಜೆ 6.30ಕ್ಕೆ ಗೌಡ ಸಮಾಜದಲ್ಲಿ ಸೇರಿ ಫಲಹಾರ ಸೇವಿಸಿ, 7.50ಕ್ಕೆ ನೆರೆಕಟ್ಟಿ ತದನಂತರ ಗಣಪತಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಲಾಯಿತು.
ಬಳಿಕ ರಾತ್ರಿ
8.50 ಕ್ಕೆ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘ ಕಟ್ಟಡದ ಬಳಿಯಿರುವ ಹುತ್ತರಿ ಗದ್ದೆಗೆ ಪೂಜೆ ಸಲ್ಲಿಸಿ ಗದ್ದೆಯಿಂದ ಕದಿರು ತೆಗೆದು ನೆರೆದಿದ್ದ ಸಮಾಜ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಉಪಾಧ್ಯಕ್ಷರಾದ ಸೆಟ್ಟೇಜನ ದೊರೆಗಣಪತಿ, ಕುಲ್ಲಚೆಟ್ಟಿರ ಕಾಶಿಪೂವಯ್ಯ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ದಬ್ಬಡ್ಕ ಡಾಟಿ ಶಾಂತಕುಮಾರಿ, ಖಜಾಂಚಿ ಬಳ್ಳಡ್ಕ ವಿಜಯಕುಮಾರ್, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಚೆರಿಯಮನೆ ಋಷಿ ಹರೀಶ್, ನಿವೃತ್ತ ಗೌಡ ಸೈನಿಕರ ಒಕ್ಕೂಟದ ಅಧ್ಯಕ್ಷ ದೇವಜನ ಚಿನ್ನಪ್ಪ ಸೇರಿದಂತೆ ಅಂಗಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಸದಸ್ಯರು ಇದ್ದರು.
Back to top button
error: Content is protected !!