ರಾಜಕೀಯ

ಪಕ್ಷ ಬಾಹಿರ ಚಟುವಟಿಕೆ: ಇಬ್ಬರು ಕಾಂಗ್ರೆಸಿಗರ ಉಚ್ಚಾಟನೆ

ಕುಶಾಲನಗರ, ಡಿ; 10: ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅನಿರ್ಧಿಷ್ಟಾವಧಿಯವರೆಗೆ ಉಚ್ಚಾಟಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಗುಡ್ಡೆಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎ.ವಿ.ಲಕ್ಷಣ್, ಹಾಗೂ ಬಿ.ಎ. ರಮೇಶ್ ಎಂಬ ಇಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಗುರುತುಸಿಕೊಂಡಿದ್ದರೂ ಬಿಜೆಪಿ ಪರವಾಗಿ ಕೆಲಸ ಮಾಡಿರುತ್ತಾರೆ. ಈ ಕುರಿತಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಹಿತಿ ತಿಳಿಸಿದ್ದಾರೆ‌. ಇಬ್ಬರು ಕಾರ್ಯಕರ್ತರ ಪಕ್ಷ ಬಾಹಿರ ಚಟುವಟಿಕೆಯ ಕುರಿತಂತೆ ಪಕ್ಷದ ಸಭೆ ನಡೆಸಿದ್ದು, ಸರ್ವ ಸದಸ್ಯರೂ ರಮೇಶ್ ಹಾಗೂ ಲಕ್ಷ್ಮಣ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಈ ವಿಚಾರವನ್ನು ಶಾಸಕರು ಹಾಗೂ ನಮ್ಮ ಪಕ್ಷದ ಜಿಲ್ಲಾ ಅಧ್ಯಕ್ಷರ ಗಮನಕ್ಕೆ ತಂದು ಉಚ್ಚಾಟಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿರುವ ಶಿಸ್ತನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಶಶಿಧರ್ ಹೇಳಿದರು.
ಈ ಸಂದರ್ಭ ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ್ಗ, ಕುಶಾಲನಗರ ಆರೋಗ್ಯ ಕೇಂದ್ರದ ಸ್ಥಾಯಿ ಸಮಿತಿ ಸದಸ್ಯ ದಾಮೋಧರ್, ಎಸ್.ಸಿ. ಎಸ್.ಟಿ. ಘಟಕದ ವಲಯ ಅಧ್ಯಕ್ಷ ಬಿ.ಬಿ.ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!