ಕುಶಾಲನಗರ, ನ 27: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ದೊಡ್ಡತ್ತೂರು ಗ್ರಾಮದ ಬೆಂಡೆಬೆಟ್ಟ ಹಾಡಿಯ ಜೇನು ಕುರುಬ ಜನಾಂಗದ ಸುಮಾರು 24 ಕುಟುಂಬಗಳಿಗೆ ಗಿರಿರಾಜ ಕೋಳಿಮರಿಯನ್ನು ವಿತರಣೆ ಮಾಡಲಾಯಿತು.
ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಕೋಳಿ ಮರಿಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಜೇನು ಕುರುಬ ಜನಾಂಗದ ಕುಟುಂಬಗಳಿಗೆ ಹೈನುಗಾರಿಕೆಯ ಬಗ್ಗೆ ಅರಿವು ಮೂಡಿಸಬೇಕು ಮತ್ತು ಕೋಳಿ ಸಾಕಾಣಿಕೆಯಿಂದ ಆಗುವಂತ ಲಾಭಗಳ ಬಗ್ಗೆ ತಿಳಿಸಿ ಅವರ ಆರ್ಥಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪಂಚಾಯಿತಿ ವತಿಯಿಂದ ಕೋಳಿ ಮರಿಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಡೆ ಬೆಟ್ಟ ಜೇನು ಕುರುಬರ ಕುಟುಂಬಗಳ ಆರ್ಥಿಕ ಗುಣಮಟ್ಟ ಅಭಿವೃದ್ಧಿಯಾಗುವಂತಹ ಚಟುವಟಿಕೆಗಳನ್ನು ಮತ್ತಷ್ಟು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಪಾರ್ವತಮ್ಮ ರಾಮೇಗೌಡ, ದಿನೇಶ್, ಅಭಿವೃದ್ಧಿ ಅಧಿಕಾರಿಯ ಸಂತೋಷ್, ಕಂದಾಯ ವಸೂಲಿಗಾರ ಅವಿನಾಶ್, ಸ್ಥಳೀಯ ಗ್ರಾಮಸ್ಥರು, ಗ್ರಾಮದ ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.
Back to top button
error: Content is protected !!