ಕುಶಾಲನಗರ, ಅ 26:ದಿನಾಂಕ: 08-10-2024 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬವರ ಕಾಫಿ ತೋಟದಲ್ಲಿ ಅರ್ದಂಬರ್ಧ ಬೆಂದಿರುವ ಗಂಡಸಿನ ಶವ ಪತ್ತೆಯಾಗಿದ್ದು, ಪ್ರಕರಣದ ತನಿಖೆ ಕೈಗೊಂಡ ಕೊಡಗು ಪೊಲೀಸ್ ತಂಡ ಹತ್ಯೆ ಆರೋಪಿಗಳನ್ನು ಬಂಧಿಸಿದ್ದಾರೆ.
ಅರ್ಧ ಸುಟ್ಟು ಕರಕಲಾಗಿರುವ ಮೃತದೇಹ ಯಾರೆಂಬುದು ಗೊತ್ತಿಲ್ಲದೇ ಇದ್ದು, ಪೊಲೀಸರಿಗೆ ಪತ್ತೆಗೆ ಒಂದು ಸವಾಲಾಗಿದ್ದು, ತಂಡವು ತಾಂತ್ರಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಸುಮಾರು 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಪರೀಶಿಲನೆ ಮುಖಾಂತರ ಸಂಚರಿಸಿದಂತ ವಾಹನಗಳ ಪರಿಶೀಲನೆ, ಮೊಬೈಲ್ ಕರೆಗಳ ಜಾಡನ್ನು ಹಿಡಿದು ಸತತ 10 ದಿನಗಳವರೆಗೆ ಮಾಹಿತಿ ಸಂಗ್ರಹಣೆ ಕಾರ್ಯಚರಣೆ ನಡೆಸಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಿದ್ದು, ಕೊನೆಯದಾಗಿ ಕೃತ್ಯಕ್ಕೆ ಬಳಸಿರಬಹುದಾದ ಸಂಶಾಯಸ್ಪದ ಕಾರಿನ ಮಾಹಿತಿ ಆದಾರದ ಮೇಲೆ ಮೃತ ರಮೇಶ್ ಕುಮಾರ್, (54 ವರ್ಷ), ಹೈದರಾಬಾದ್ ಎಂಬುದಾಗಿ ಪತ್ತೆಹಚ್ಚಿದ್ದು, ಆತನನ್ನು ಕೊಲೆ ಮಾಡಿದ ಆರೋಪಿಗಳಾದ ಆತನ 2ನೇ ಹೆಂಡತಿ ನಿಹಾರಿಕಾ, ಆಕೆಯ ಬಾಯ್ ಫ್ರೆಂಡ್ ಗಳಾದ ಹರಿಯಾಣದ ಅಂಕುಲ್ ರಾಣ ಹಾಗೂ ನಿಖಿಲ್ ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ Marchendice benz ಕಾರನ್ನು ವಶಡಿಸಿಕೊಳ್ಳಲಾಗಿದೆ.
ಘಟನೆಯ ಸಂಕ್ಷಿಪ್ತ ವಿವರ:
ಆರೋಪಿಯು ನಿಹಾರಿಕ ಮೃತ ರಮೇಶ್ ಕುಮಾರ್ ನನ್ನು ವಿವಾಹವಾಗಿದ್ದು, ನಿಹಾರಿಕಾಳು ಆಸ್ತಿ ಮಾರಾಟದಲ್ಲಿ 8 ಕೋಟಿ ಹಣ ಪಡೆಯುವ ಉದ್ದೇಶದಿಂದ, ನಿಹಾರಿಕಾಳ ಮತ್ತೊಬ್ಬ ಬಾಯ್ ಫ್ರೆಂಡ್ ಹರಿಯಾಣ ಮೂಲದ ಅಂಕುರ್ ರಾಣ ಎಂಬಾತನನ್ನು ಕರೆಸಿ, ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ಮೃತ ರಮೇಶ್ ಕುಮಾರ್‌ನ Mercedes benz (TS. 07-FS-5679) ಕಾರಿನಲ್ಲಿ ಹೊರಟು ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಇಬ್ಬರೂ ಸೇರಿ ಕೊಲೆ ಮಾಡಿ ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬಂದ ನಿಹಾರಿಕಾ ತನ್ನ ಬಾಯ್ ಫ್ರೆಂಡ್ ನಿಖಿಲ್ ಬಳಿ ಬಂದು ವಿಚಾರ ತಿಳಿಸಿ ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿ ಪನ್ಯ ಎಸ್ಟೇಟ್ ಬಳಿ ತಂದು ಯಾರಿಗೂ ಗೊತ್ತಾಗದಂತೆ ಬೆಂಕಿ ಹಚ್ಚಿ ಕಾರಿನೊಂದಿಗೆ ತೆರಳಿರುತ್ತಾರೆ.
ವಿಶೇಷ ತನಿಖಾ ತಂಡವು ಪ್ರಕರಣವನ್ನು ಭೇದಿಸಿ ದಿನಾಂಕ : 22-10-2024 ರಂದು ಮೊದಲಿಗೆ ನಿಹಾರಿಕಾ ಮತ್ತು ನಿಖಿಲ್ ನನ್ನು ಬಂದಿಸಿ ವಿಚಾರಣೆ ಮಾಡಿ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ವಿಶೇಷ ತನಿಖಾಧಿಕಾರಿಯಾಗಿ ಸೋಮವಾರಪೇಟೆ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮುದ್ದು ಮಾದೇವ ರವರನ್ನು ನೇಮಿಸಿ ತನಿಖೆ ಮುಂದುವರೆಸಿರುತ್ತಾರೆ.
ಪ್ರಕರಣದ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಂಕುರ್ ರಾಣ ಈತನ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಸುಂಟಿಕೊಪ್ಪ ಪಿಎಸ್‌ಐ, ಚಂದ್ರಶೇಖರ್, ಸಿಬ್ಬಂದಿಯವರಾದ ರಂಜಿತ್, ಉದಯಕುಮಾರ್, ಸುದೀಶ್ ಕುಮಾರ್ ಹರಿದ್ವಾರಕ್ಕೆ ತೆರಳಿ ಮಿಂಚಿನ ಕಾರ್ಯಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡು ಕರೆತರುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿದ ವಿಶೇಷ ತನಿಖಾ ತಂಡದ ವಿವರ :
1. ಗಂಗಾಧರಪ್ಪ.ಆರ್.ವಿ. ಡಿಎಸ್ ಪಿ, ಸೋಮವಾರಪೇಟೆ ಉಪ ವಿಭಾಗ
2. ರಾಜೇಶ್.ಕೆ, ಸಿಪಿಐ, ಕುಶಾಲನಗರ ವೃತ್ತ,
3. ಶ್ರೀ ಮುದ್ದು ಮಾದೇವ ಎಂ, ಸೋಮವಾರಪೇಟೆ ಪೊಲೀಸ್ ಠಾಣೆ
4. ಚಂದ್ರಶೇಖರ್ ಹೆಚ್.ವಿ, ಪಿಎಸ್ಐ, ಸುಂಟಿಕೊಪ್ಪ ಠಾಣೆ,
5. ಮೋಹನ್ ರಾಜ್ ಪಿ, ಪಿಎಸ್‌ಐ, ಕುಶಾಲನಗರ ಗ್ರಾಮಾಂತರ ಠಾಣೆ.
12. ಶ್ರೀ ಸುಧೀಶ್ ಕುಮಾರ್.ಕೆ.ಎಸ್, ಹೆಚ್ ಸಿ, ಸೋಮವಾರಪೇಟೆ ಠಾಣೆ
13.ರಮೇಶ್.ಎನ್.ಆರ್, ಹೆಚ್.ಸಿ, ಕುಶಾಲನಗರ ಸಂಚಾರಿ ಠಾಣೆ
14. ರಂಜಿತ್.ಜಿ.ಆರ್, ಪಿಸಿ, ಕುಶಾಲನಗರ ಪಟ್ಟಣ ಠಾಣೆ.
15. ಬಾಬು.ಎಲ್, ಪಿಸಿ, ಕುಶಾಲನಗರ ಪಟ್ಟಣ ಠಾಣೆ.
16 ಮಹೇಂದ್ರ ಕೆ.ಎಸ್, ಹೆಚ್‌ಸಿ, ಸಿಪಿಐ, ವೃತ್ತ ಕಛೇರಿ ಕುಶಾಲನಗರ,
17. ಸಂದೇಶ.ಎಸ್.ಎನ್. ಪಿಸಿ, ಸಿಪಿಐ, ವೃತ್ತ ಕಛೇರಿ ಕುಶಾಲನಗರ.
18. ಜಗದೀಶ್.ಕೆ.ಆರ್, ಪಿಸಿ, ಸುಂಟಿಕೊಪ ಪಾಣೆ,
19. ಪ್ರವೀಣ್ ಎಸ್.ಪಿಸಿ, ಸುಂಟಿಕೊಪ್ಪ,
20: ನಿಶಾಂತ್ ಎಸ್.ಪಿ, ಪಿಸಿ, ಸುಂಟಿಕೊಪ್ಪ ಠಾಣೆ
21. ರಾಜೇಶ್.ಸಿ.ಕೆ, ಹೆಚ್ಸಿ, ಸಿಡಿಆರ್ ವಿಭಾಗ, ಜಿಲ್ಲಾ ಪೊಲೀಸ್ ಕಛೇರಿ, ಕೊಡಗು ಜಿಲ್ಲೆ
22. ಶ್ರೀ ಪ್ರವೀಣ್.ಬಿ.ಕೆ, ಹೆಚ್ಸಿ, ಸಿಡಿಆರ್ ವಿಭಾಗ, ಜಿಲ್ಲಾ ಪೊಲೀಸ್ ಕಛೇರಿ, ಕೊಡಗು ಜಿಲ್ಲೆ.
ಆರೋಪಿಗಳ ವಿವರ :
1. ನಿಹಾರಿಕಾ.ಪಿ. 29 ವರ್ಷ, ರಾಮಮೂರ್ತಿ ನಗರ, ಬೆಂಗಳೂರು ಮೂಲ: ಮೋಂಗಿರ್ ನಗರ, ಯಾದಾದ್ರಿ ಜಿಲ್ಲೆ, ತೆಲಾಂಗಾಣ ರಾಜ್ಯ
2. ನಿಖಿಲ್ ಮೈರೆಡ್ಡಿ, 28 ವರ್ಷ, ರಾಮಮೂರ್ತಿ ನಗರ ಬೆಂಗಳೂರು ಮೂಲ: ವಾಸವಿ ನಗರ, ಕಡಪ ಜಿಲ್ಲೆ ಅಂಧ್ರ ಪ್ರದೇಶ ರಾಜ್ಯ,
3. ಆಂಕೂರ್ ರಾಣ, 30 ವರ್ಷ, ಗರುಂದ, ಕಾರ್ನಲ್, ಹರಿಯಾಣ ರಾಜ್ಯ
ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೊಬೈಲ್ ಗಳನ್ನು ವರಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ & ಸಿಬ್ಬಂದಿಗಳನ್ನು ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ ಹಾಗೂ ಸುಂದರ್ ರಾಜ್.ಕೆ.ಎಸ್.ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.