ಕಾರ್ಯಕ್ರಮ

ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ

ಹಳೆಯ ವಿದ್ಯಾರ್ಥಿಯೂ ಆದ ರಾಜಕಾರಣಿ ಹಾಗೂ ಉದ್ಯಮಿಗಳಾದ ಸಿದ್ದಲಿಂಗಪುರದ ಮುತ್ತಪ್ಪ ಹಾಗೂ ಮುದ್ದಪ್ಪ ಅವಳಿ ಸೋದರರಿಂದ ಕಾರ್ಯಕ್ರಮ ಆಯೋಜನೆ

ಕುಶಾಲನಗರ, ಅ 13: ಹೆಬ್ಬಾಲೆಯ ಪ್ರೌಢಶಾಲೆಯ 1988 ರಿಂದ 1991 ರ ಅವಧಿಯಲ್ಲಿ ಪ್ರೌಢಶಿಕ್ಷಣ ಪೂರೈಸಿದ ನೂರಾರು ಮಂದಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಚರಿಸಿ ಸುಮಧುರ ನೆನಪುಗಳನ್ನು ಸ್ಮರಿಸಿಕೊಂಡರು.ಮೂವತ್ತು ವರ್ಷಗಳ ನೆನಪುಗಳನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ರಾಜಕಾರಣಿ ಹಾಗೂ ಉದ್ಯಮಿಗಳಾದ ಸಿದ್ದಲಿಂಗಪುರದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಅವಳಿ ಸೋದರರ ಪ್ರಯತ್ನದಿಂದಾಗಿ ನಡೆದ ಸ್ನೇಹ ಸಮ್ಮಿಲನದಲ್ಲಿ ಜಿಲ್ಲೆಯ ಮೂಲೆ ಮೂಲೆಯಷ್ಟೇ ಅಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇದ್ದಂತಹ ಹಳೆಯ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದರು.
ಶಾಲೆಯ ಆ ಕಾಲದ ಈ ವಿದ್ಯಾರ್ಥಿಗಳ ಬ್ಯಾಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಕೊಂಡವರಿದ್ದರೆ, ಉಳಿದ ಕೆಲವು ಮಂದಿ ಸೇನೆಯಲ್ಲಿ, ಬೆರಳೆಣಿಕೆ ಮಂದಿ ಕ್ರೀಡಾ ಕ್ಷೇತ್ರದಲ್ಲಿ, ಪೊಲೀಸ್ ಇಲಾಖೆಯಲ್ಲಿ, ವಾಣಿಜ್ಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಇದ್ದವರೂ ಇದ್ದರು.
ಈ ಪೈಕಿ ಹಲವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ಶಾಲೆಯಲ್ಲಿ ತಾವು ಕಲಿಯುವಾಗ ಇದ್ದಂತಹ ಶಾಲಾ ಗುರುಗಳನ್ನು ನೆನೆದರು.
ಶಾಲೆಯಲ್ಲಿ ಆ ದಿನಗಳಲ್ಲಿ ಆಡಿದ ತುಂಟಾಟಗಳನ್ನು ನೆನೆದರು.
ಪರಸ್ಪರ ಒಬ್ಬರಿಗೊಬ್ಬರು ಕುಶಲೋಪರಿಗೈದರು.
ವಯುಕ್ತಿಕವಾದ ಕೌಟುಂಬಿಕ ವಿಚಾರಗಳ ವಿನಿಮಯಗೈದರು. ಅಗಲಿದ ಸಹಪಾಠಿಗಳಿಗೆ ನುಡಿ ನಮನ‌ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ
ನಾಪಂಡ ಮುತ್ತಪ್ಪ ಅವರು, ಪ್ರೌಢಾವಸ್ಥೆಯ ಸುಮಧುರ ಸುಂದರ ಸವಿ ನೆನೆಪುಗಳು ಸದಾಕಾಲ ಹಚ್ಚಹಸಿರಾಗಿ ಉಳಿಯಲಿದೆ. ಪ್ರೌಢಶಿಕ್ಷಣ ಸಂದರ್ಭ ಉಂಟಾದ ಬಾಂಧವ್ಯ ನಿರಂತರವಾಗಿ ಮುಂದುವರೆಯಲು ಜೀವನದ ಏಳುಬೀಳುಗಳು ಕಂಡು ಯಶಸ್ಸು ಗಳಿಸಿದ ಪರಿ ಹಂಚಿಕೊಳ್ಳಲು, ದೂರದಲ್ಲಿ ನೆಲೆಸಿರುವ ಸಹಪಾಠಿಗಳು ಒಗ್ಗೂಡಿಸಲು ಇಂತಹ ಕಾರ್ಯಕ್ರಮಗಳು ಉತ್ತಮ‌ ವೇದಿಕೆ ಎಂದರು.
ನಾಪಂಡ ಮುದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನೇಹ ಸಮ್ಮಿಲನದ ಬಳಿಕ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದ ಮನರಂಜನಾ ಕೂಟದಲ್ಲಿ ಸೇರ್ಪಡೆಗೊಂಡು ಬಗೆ ಬಗೆಯ ಭಕ್ಷ್ಯಗಳ ಸವಿದರು‌. ನಂತರ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!