ಪ್ರತಿಭೆ
ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ಮಿಂಚಿದ ಕ್ರಿಯೇಟಿವ್ ನೃತ್ಯ ಶಾಲೆಯ ವಿದ್ಯಾರ್ಥಿಗಳು
ದಸರಾ ವೇದಿಕೆಯಲ್ಲಿ ಗಮನಸೆಳೆದ ಆಂಜನೇಯ ನೃತ್ಯ, ಗಾರ್ಬಾ ನೃತ್ಯ, ಡಾ.ಪುನೀತ್ ರಾಜ್ ಕುಮಾರ್ ಜೀವನ್ ಚರಿತ್ರೆಯ ನೃತ್ಯ, ಹಿಪ್ ಹಾಪ್ ಇತ್ಯಾದಿ ನೃತ್ಯ ಪ್ರಕಾರಗಳು


ಕುಶಾಲನಗರ, ಅ 14: ದಿನಾಂಕ: 11-10-2024 ಶುಕ್ರವಾರ ಗೋಣಿಕೊಪ್ಪದ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 46 ನೇ ವರ್ಷದ ಅದ್ದೂರಿ ದಸರಾ ಜನೋತ್ಸವ ವೇದಿಕೆಯಲ್ಲಿ ಕುಶಾಲನಗರ, ಕೂಡಿಗೆಯ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ನೃತ್ಯ ಶಾಲೆಯ ವಿದ್ಯಾರ್ಥಿಗಳು ಹಲವಾರು ಗಮನ ಸೆಳೆಯುವ ನೃತ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಅತಿಥಿಗಳ ಹಾಗೂ ಜನರ ಮೆಚ್ಚುಗೆಗೆ ಪಾತ್ರರಾದರು. ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯು ಈ ಹಿಂದೆ ಹಲವಾರು ವರ್ಷಗಳಿಂದ ಹಲವಾರು ಗಣ್ಯ ವೇದಿಕೆಗಳಲ್ಲಿ ಉತ್ತಮ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಬರುತ್ತಿದ್ದು ಪ್ರತೀ ವರ್ಷದಂತೆ ಈ ಬಾರಿಯೂ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ವೇದಿಕೆಯಲ್ಲಿ ಆಂಜನೇಯ ನೃತ್ಯ, ಗಾರ್ಬಾ ನೃತ್ಯ, ಡಾ.ಪುನೀತ್ ರಾಜ್ ಕುಮಾರ್ ಜೀವನ್ ಚರಿತ್ರೆಯ ನೃತ್ಯ, ಹಿಪ್ ಹಾಪ್ ನೃತ್ಯ ಹಾಗೂ ಇತ್ಯಾದಿ ವಿಶೇಷ ನೃತ್ಯ ಪ್ರಕಾರಗಳನ್ನು ಮಾಡುವ ಮೂಲಕ ಕ್ರಿಯೇಟಿವ್ ನೃತ್ಯ ಶಾಲೆಯ ಪುಟಾಣಿಗಳು ಜನರ ಗಮನ ಸೆಳೆದರು.