ಕುಶಾಲನಗರ, ಅ 03: ಕುಶಾಲನಗರದ ಕೇರಳ ಸಮಾಜದಿಂದ ಅ.6 ರಂದು ಭಾನುವಾರ ಓಣಂ ಆಚರಣೆ ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ರವೀಂದ್ರನ್ ತಿಳಿಸಿದ್ದಾರೆ.
ಸಮಾಜದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, 24 ನೇ ವರ್ಷದ ಓಣಂ ಆಚರಣೆ ಸಂಪ್ರದಾಯದಂತೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಸ್ಥಾಪಕ ಅಧ್ಯಕ್ಷ ಶಿವನ್ ಅವರ ನಿಧನ ಹಾಗೂ ವಯನಾಡಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಮೆರವಣಿಗೆ, ಪೂಕಳಂ ಸ್ಪರ್ಧೆ ಈ ಬಾರಿ ಆಯೋಜಿಸಿಲ್ಲ.
ಹೆಚ್ಚು ಆಡಂಬರವಿಲ್ಲದೇ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದಂತೆ ಸರಳ ರೀತಿಯಲ್ಲಿ ಈ ಬಾರಿ ಓಣಂ ಆಚರಣೆ ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ನಿರ್ದೇಶಕ ವರದ ಮಾತನಾಡಿ, ಚಂಡೆವಾದ್ಯಗಳೊಂದಿಗೆ ಸಾಂಪ್ರದಾಯಿಕ ಉಡುಗೆತೊಡುಗೆ ತೊಟ್ಟು ವರ್ಷ ವರ್ಷ ಆಚರಿಸಿಕೊಂಡು ಬರುತ್ತಿದ್ದ ಮೆರವಣಿಗೆ ಘೋಷಾಯಾತ್ರೆ ಮತ್ತು ಪೂಕ್ಕಳಂ ಸ್ಪರ್ಧೆ ಹೊರತುಪಡಿಸಿ ತಿರುವಾದಿರಕಳಿ, ಭರತನಾಟ್ಯ, ನಾಡೋಡಿನೃತ್ಯ, ನಾಡಗೀತೆ, ಓಣಂ ಪಾಟ್ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ ೧ ಗಂಟೆಯ ವಿಶೇಷ ಓಣಂ ಸಧ್ಯ ಎಂಬ ರಸದೌತಣದ ನಂತರ ಆಯೋಜಿಸಲಾಗಿದೆ. ಇದರೊಂದಿಗೆ ಮಕ್ಕಳಿಗಾಗಿ ಡ್ರಾಯಿಂಗ್ ಸ್ಪರ್ಧೆ ಕೂಡ ಆಯೋಜಿಸಿದ್ದು ವಿಜೇತರು ಗಳಿಗೆ ಬಹುಮಾನ ವಿತರಣೆಯಾಗಲಿದೆ. ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ, ಮಾಜಿ ಸಚಿವ, ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು
ರಂಜನ್,ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಗುಡ್ಡೆಹೊಸೂರು ಪಂಚಾಯತಿ ಅಧ್ಯಕ್ಷೆ ರುಕ್ಮಿಣಿಮುರುಳಿಧರನ್, ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ,ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕೇರಳ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ರಾಬಿನ್ ಕೆ.ಜೆ, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕರಾದ ಪಿ.ಕೆ.ಧನರಾಜ್ ಇದ್ದರು.
Back to top button
error: Content is protected !!