ಕುಶಾಲನಗರ, ಅ 02: ಕೇರಳ ರಾಜ್ಯ ಮೂಲದ ಮಹಮ್ಮದ್ ಅನೂಪ್ ಈತನು ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದು, ಇವನು ಕೇರಳದ ಕಾಸರಗೋಡಿನ ಮೆಹರೂಫ್ (37 ವರ್ಷ) ಹಾಗೂ ರವೂಫ್ (28 ವರ್ಷ), ಅರ್ಜಿ ಗ್ರಾಮ ವಿರಾಜಪೇಟೆ ಇವರೊಂದಿಗೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡ್ರೋಪೋನಿಕ್ ರೀತಿಯಲ್ಲಿ ಬೆಳೆದಿರುವ ಗಾಂಜಾ (ಹೈಡ್ರೋ ಗಾಂಜಾವನ್ನು) ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರರಾಷ್ಟ್ರೀಯ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸಿನವರು ಯಶಸ್ವಿಯಾಗಿ ಭೇದಿಸಿರುತ್ತಾರೆ.
ಕಾಸರಗೋಡಿನ 37 ವರ್ಷ ಪ್ರಾಯದ ಮೆಹರೂಫ್ ಮತ್ತು ಮಹಮ್ಮದ್ ಅನೂಪ್ ಇವರುಗಳು ವಿರಾಜಪೇಟೆಯ ರವೂಫ್, ನಾಸೀರುದ್ದೀನ್, ವಾಜಿದ್, ನಾಪೋಕ್ಲುವಿನ ಯಾಹಿಯಾ, ಆಕನಾಸ್, ಅಜ್ಮಲ್, ಕೇರಳದ ರಿಯಾಜ್ ಇವರುಗಳನ್ನು ಒಳಗೊಂಡ ತಂಡ ರಚಿಸಿಕೊಂಡು ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಾಟ ಕಾರ್ಯದಲ್ಲಿ ತೊಡಗಿದ್ದು, ಬ್ಯಾಂಕಾಕ್ ನಿಂದ ಹೈಡ್ರೋ ಗಾಂಜಾವನ್ನು ಯಾಹ್ಯಾ ಎಂಬುವನು ದಿನಾಂಕ.23-09-2024 ರಂದು ರಾತ್ರಿ 11-30 ಗಂಟೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದಿರುತ್ತಾನೆ. ನಂತರ ನಾಸೀರುದ್ದೀನ್, ಅಕನಾಸ್, ಅಜ್ಮಲ್, ರಿಯಾಜ್ ಮತ್ತು ವಾಜೀದ್ ರವರು ಯಾಹ್ಯಾನೊಂದಿಗೆ ಸೇರಿ ಕೆಎಲ್ 72 ಡಿ 6697 ಸ್ಬಿಫ್ಟ್
ಕಾರಿನಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಯಾಹ್ಯಾನನ್ನು ಕರೆದುಕೊಂಡು ಕೊಡಗು ಜಿಲ್ಲೆಗೆ ಆಗಮಿಸಿ ಗೋಣಿಕೊಪ್ಪ ಬೆಳ್ಳಿಯಪ್ಪ ರೆಸಿಡೆನ್ಸಿಯಲ್ಲಿ ತಂಗಿರುತ್ತಾರೆ. ಕೇರಳದ ಮೆಹರೂಫ್‌ನ ಮುಂದಿನ ನಿರ್ದೇಶನಕ್ಕಾಗಿ ಈ ತಂಡ ಕಾಯುತ್ತಿದ್ದು, ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎಂದು ತಿಳಿದು ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಮಾಡುವ ಉದ್ದೇಶದಿಂದ ವಿರಾಜಪೇಟೆಯಿಂದ ಮಡಿಕೇರಿಗೆ ಬರುವಾಗ ಕೊಡಗು ಪೊಲೀಸ್ ಇಲಾಖೆಯ ಡಿ.ಸಿ.ಆರ್.ಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮೇದಪ್ಪ ಐ.ಪಿ. ಮತ್ತು ತಂಡದ ಸದಸ್ಯರಾದ ಯೋಗೇಶ್, . ನಿರಂಜನ್, . ಶರತ್ ರೈ ರವರಿಗೆ ಬಂದಂತಹ ಖಚಿತ ಮಾಹಿತಿ ಮೇರೆಗೆ ಮಾಹಿತಿಯನ್ನು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್ ರವರಿಗೆ ತಿಳಿಸಿ, ಸದರಿಯವರ ಸೂಚನೆಯಂತೆ ಪೊಲೀಸ್ ವೃತ್ತ ನಿರೀಕ್ಷಕರಾದ . ಅನೂಪ್ ಮಾದಪ್ಪ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಲೋಕೇಶ್ ಡಿಸಿಆರ್‌ಬಿ ಘಟಕದ ಸದಸ್ಯರಾದ ಶ ಯೋಗೇಶ್, ನಿರಂಜನ್, ರವಿಕುಮಾರ್, ರವಿ ಕುಮಾರ್, ಮುರುಳಿ ಶರತ್ ರೈ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ವಿರಾಜಪೇಟೆ ರಸ್ತೆಯಲ್ಲಿರುವ ರಮ್ಯ ಸರ್ವಿಸ್ ಸ್ಟೇಷನ್ ಬಳಿಯಲ್ಲಿ ದಿನಾಂಕ 28-09-2024 ರಂದು ದಾಳಿ ನಡೆಸಿ ಆರೋಪಿಗಳಾದ
1). ನಾಸಿರುದ್ದೀನ್ ಎಂ.ಯು. @ ನಾಸೀರ್, ಪ್ರಾಯ 26 ವರ್ಷ, ವಾಸ ಗುಂಡಿಗೆರೆ ಹೆಗ್ಗಳ ಗ್ರಾಮ,
2). ಯಾಹ್ಯಾ ಸಿಹೆಚ್ ಯಯ್ಯು, ಪ್ರಾಯ 28 ವರ್ಷ, ಎಡಪಾಲ ಗ್ರಾಮ,
3). ಅಕನಾಸ್ ಪ್ರಾಯ 26 ವರ್ಷ, ಕುಂಜಿಲ ಗ್ರಾಮ,
4). ವಾಜೀದ್ ಪ್ರಾಯ 26 ವರ್ಷ, ಬೆಟ್ಟೋಳಿ ಗ್ರಾಮ,
5). ರಿಯಾಜ್ ಪ್ರಾಯ 44 ವರ್ಷ, ಕಲ್ಲಿಲ್ತಾಯ ಗ್ರಾಮ, ಕಣ್ಣೂರು, ಕೇರಳ ರಾಜ್ಯ
ಇವರನ್ನು ವಶಕ್ಕೆ ಪಡೆದು ಬಂಧಿಸಿ ಅವರ ಬಳಿಯಿದ್ದ ಸುಮಾರು 3 ಕೋಟಿ ಬೆಲೆ ಬಾಳುವ 3 ಕೆ.ಜಿ. 31 ಗ್ರಾಂ ತೂಕದ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕೆಎಲ್ 72 ಡಿ 6697 ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಕೃತ್ಯಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿ ರವೂಫ್ ಪ್ರಾಯ 28 ವರ್ಷ ಆರ್ಜಿ ಗ್ರಾಮ ಪ್ರಸ್ತುತ ಬೆಂಗಳೂರು ವಾಸ ಈತನನ್ನು ದಿನಾಂಕ 28-09-2024 ರಂದು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ನಿರಂಜನ್, ಪ್ರದೀಪ್ ಕುಮಾರ್, ಮುರುಳಿ ಮತ್ತು ನವೀನ್ ರವರ ತಂಡ ವಶಕ್ಕೆ ಪಡೆದಿರುತ್ತಾರೆ. ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ ಮತ್ತು ಪ್ರವೀಣ್ ಕುಮಾರ್ ರವರು ತಾಂತ್ರಿಕ ಸಹಕಾರ ನೀಡಿರುತ್ತಾರೆ.
ದಿನಾಂಕ 29-09-2024 ರಂದು ರಾತ್ರಿ 10-30 ಗಂಟೆಗೆ ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಮೆಹರೂಫ್ ಪ್ರಾಯ 37 ವರ್ಷ, ಕಾಸರಗೋಡು ಈತನು ಥೈಲ್ಯಾಂಡ್ ದೇಶದ ಬ್ಯಾಂಕಾಕ್ ಗೆ
ಪರಾರಿಯಾಗಲು ಯತ್ನಿಸುತ್ತಿರುವಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್ ಸಕ್ಷೇನಾ, ಐಪಿಎಸ್
ಮತ್ತು ಕೊಚ್ಚಿನ್ ಏರ್ ಪೋರ್ಟ್ ಇಮಿಗ್ರೇಶನ್ ಅಧಿಕಾರಿಯಾದ ಶ ಕೃಷ್ಣರಾಜ್ ಐಪಿಎಸ್ ರವರ ಸಹಕಾರದಿಂದ
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿಗಳಾದ ಯೋಗೇಶ್,
ಪ್ರಭಾಕರ್, ರಾಜೇಶ್ ರವರ ತಂಡ ಕೊಚ್ಚೇನ್ ಏರ್ ಪೋರ್ಟನಲ್ಲಿ ಬಂಧಿಸಿರುತ್ತಾರೆ.
ಇದೊಂದು ಅಪರೂಪ ಪ್ರಕರಣವಾಗಿದ್ದು ಹೈಡ್ರೋ ಗಾಂಜಾ ಎಂಬುವುದು ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು
ನತೆಯನ್ನು ಕೊಡುವ ಮಾದಕ ದ್ರವ್ಯವಾಗಿದ್ದು, ಹಾಗೂ ದುಬಾರಿ ಬೆಲೆಯದ್ದಾಗಿರುತ್ತದೆ. ಹೈಡ್ರೀ ಗಾಂಜಾವನ್ನು
ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹಾಗೂ ಹವಾ ನಿಯಂತ್ರಿತ ಕೊಠಡಿಯಲ್ಲಿ ನೀರಿನಿಂದ
ಬೆಳೆಯಲಾಗುತ್ತದೆ. ಈ ಪ್ರಕರಣವನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರರಾಜ್
ಕೆ.ಎಸ್. ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್ ಹಿರವರಾದ ಮಹೇಶ್
`ಕುಮಾರ್ ಎಸ್. ಕೆ.ಎಸ್.ಪಿ.ಎಸ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ರಾಜು ಪಿ.ಕೆ. ರವರ ನೇತೃತ್ವದ
ತಂಡ ಸತತ 72 ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ.
Back to top button
error: Content is protected !!