ಮಡಿಕೇರಿ, ಸೆ 30: ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ.ಅ) ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸುವಂತೆ ಇಲ್ಯಾಸ್ ತಂಙಲ್ ಎಮ್ಮೆಮಾಡು ಕರೆ ನೀಡಿದರು.ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ದಮಾಮ್ ಝೋನಲ್ ಸಮಿತಿ, ದಮ್ಮಾಮ್ ನಲ್ಲಿ ಆಯೋಜಿಸದ್ದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1499 ಜನ್ಮದಿನಾಚರಣೆಯ ಅಂಗವಾಗಿ “ಸ್ನೇಹ ಸಂಗಮ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಪ್ರವಾದಿಯ ಅವರ ಜೀವನವೊಂದು ತೆರದ ಪುಸ್ತಕವಾಗಿದೆ.ಇಡೀ ಮಾನವ ಕುಲಕ್ಕೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನವೂ ಮಾದರಿಯಾಗಿದೆ ಎಂದು ಇಲ್ಯಾಸ್ ತಂಙಲ್ ಹೇಳಿದರು.ಸ್ವಾಂತನ ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ದಮ್ಮಾಮ್ ಝೋನಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲ್ಯಾಸ್ ತಂಙಲ್ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಹಫೀಲ್ ಸಹದಿ ಕೊಡಗು ಹಾಗೂ ಹಂಸ ಉಸ್ತಾದ್ ಭಾಗವಹಿಸಿದ್ದರು.ಈ ಸಂದರ್ಭ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ದಮ್ಮಾಮ್ ಝೋನಲ್ ವತಿಯಿಂದ ಇಲ್ಯಾಸ್ ತಂಙಲ್ ಮತ್ತು ಹಫೀಲ್ ಸಹದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ದಮ್ಮಾಮ್ ಝೋನಲ್ ಅಧ್ಯಕ್ಷ ನಿಝಾಮ್ ಅಂಬಟ್ಟಿ,ಖಜಾಂಜಿ ಆದಂ ಕಂಡಕರೆ, ಕಾರ್ಯದರ್ಶಿ ಆಬಿದ್ ಝಹ್ಹರಿ,ಸಮಿತಿ ಸದಸ್ಯರಾದ ಫಾರೂಖ್ ಹೊಸಕೋಟೆ,ಕಲಂದರ್ ಹೊಸಕೋಟೆ,ಆಬಿದ್ ಕಂಡಕರೆ, ನಿಝಾಮ್,ಇರ್ಫಾನ್, ಮತ್ತಿತರರು ಇದ್ದರು.
Back to top button
error: Content is protected !!