ಸೋಮವಾರಪೇಟೆ, ಸೆ 30: ಕೊಡಗು ಜಿಲ್ಲೆಯ ಇಬ್ಬರು ಅತ್ಯುತ್ತಮ ಸರ್ವೇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂದಾಯ ಹಾಗು ಸರ್ವೇ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯಹಾಗೂ ಸರ್ವೇ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ ಸರ್ಕಾರವು ವರ್ಷದ ಅತ್ಯುತ್ತಮ ಕಂದಾಯ ಹಾಗು ಸರ್ವೇ ಅಧಿಕಾರಿ 2024 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕುಶಾಲನಗರ ತಾಲೂಕಿನಿಂದ.ವೆಂಕಟೇಶ್ ಹಾಗೂ ಸೋಮವಾರಪೇಟೆ ತಾಲ್ಲೋಕಿನ ಜೀವನ್ ರವರಿಗೆ ಇತ್ತೀಚೆಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ಪ್ರಶಸ್ತಿ ಪ್ರದಾನ ಮಾಡಿದರು.ಈ ಸಂದರ್ಭ
ಕಂದಾಯ ಇಲಾಖೆಯ ಆಯುಕ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು
Back to top button
error: Content is protected !!