ಕುಶಾಲನಗರ, ಸೆ 24: ಸೆ.25 ರಂದು ನಡೆಯಲಿರುವ ಕುಶಾಲನಗರ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಬಿಜೆಪಿ ಸದಸ್ಯೆ ಶೈಲಾ ಕೃಷ್ಣಪ್ಪ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು,ಎರಡು ವರ್ಷಗಳ ಹಿಂದೆ ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಸೇರಿಸಿ ಅಂದಿನ ಬಿಜೆಪಿ ಸರ್ಕಾರ ಪುರಸಭೆಯಾಗಿ ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಿ ರಾಜ್ಯಪಾಲರ ಮೂಲಕ ಆದೇಶವನ್ನು ಹೊರಡಿಸಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಅದನ್ನು ಕಡೆಗಣಿಸಿ ಮತ್ತೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲು ಮುಂದಾಗಿರುವುದಲ್ಲದೆ ಕಾನೂನು ಬಾಹಿರವಾಗಿ ಎರಡು ನಾಮನಿರ್ದೇಶಿತ ಸದಸ್ಯರುಗಳಿಗೆ ಮತದಾನದ ಹಕ್ಕು ನೀಡಿ ಅಧಿಕಾರಕ್ಕೆ ಏರಲು ಮುಂದಾಗಿದೆ. ಮಳ್ಳುಸೋಗೆ ಗ್ರಾಮಪಂಚಾಯಿತಿ ಯನ್ನು ಪುರಸಭೆಗೆ ಸೇರಿಸಿಕೊಳ್ಳುವ ಭರವಸೆ ನೀಡಿ ಕೈಬಿಟ್ಟು 23 ಮಂದಿ ಮುಳ್ಳುಸೋಗೆ ಗ್ರಾಪಂ ಸದಸ್ಯರುಗಳಿಗೆ ವಂಚನೆ ಮಾಡಿರುವುದು ಸರಿಯಲ್ಲ. ಸರ್ಕಾರದ ಈ ವರ್ತನೆಯನ್ನು ಖಂಡಿಸಿ ನಾಳೆ ನಡೆಯುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಾನು ಮತದಾನ ಮಾಡುವುದಿಲ್ಲ ಎಂದಿರುವ ಅವರ ,ಪುರಸಭೆಯ ಚುನಾವಣೆ ಆದರೆ ಮಾತ್ರ ಮತದಾನದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
Back to top button
error: Content is protected !!