ಕುಶಾಲನಗರ,ಸೆ. 23: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿರುವ ಕಕ್ಕೆ ಹೊಳೆಯ ಮೇಲ್ಬಾಗದ ಸೇತುವೆಯು ಈ ಸಾಲಿನಲ್ಲಿ ಸುರಿದ ಅತಿಯಾದ ಮಳೆಯಿಂದ, ಮತ್ತು ಹಾರಂಗಿ ಮುಖ್ಯ ನಾಲೆಯ ದುರಸ್ತಿಯ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ಲಾರಿಗಳ ಓಡಾಟದಿಂದಾಗಿ ಹುದುಗೂರು ಮತ್ತು ಮದಲಾಪುರ ಮಧ್ಯಭಾಗದಲ್ಲಿರುವ ಕಕ್ಕೆ ಹೊಳೆಯ ಕಿರು ಸೇತುವೆಯ ಸಂಪೂರ್ಣವಾಗಿ ಹಾಳಾಗಿದ್ದು ಈ ವ್ಯಾಪ್ತಿಯ ಸುಮಾರು 20.ಕ್ಕೂ ಹೆಚ್ಚು ಕುಟುಂಬದವರ ಪ್ರಮುಖ ಉಪ ರಸ್ತೆಯಾಗಿದ್ದು ,ಈ ರಸ್ತೆಯು ಹಾರಂಗಿ ನೀರಾವರಿ ಇಲಾಖೆಯ ಅಧೀನಕ್ಕೆ ಬರುವುದರಿಂದ ದುರಸ್ತಿ ಪಡಿಸುವಂತೆ ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಸಾರ್ವಜನಿಕರ ಅಗ್ರಹವಾಗಿದೆ.
ಈ ಕಿರು ಸೇತುವೆಯು ಅತಿಯಾದ ಮಳೆಯಿಂದಾಗಿ ಕಾಂಕ್ರೀಟ್ ಸೇತುವೆಯ ಮೂರು ಭಾಗಗಳಲ್ಲಿ ಕೊಚ್ಚಿಹೋಗಿರುವುದರಿಂದಾಗಿ,
ಈ ವ್ಯಾಪ್ತಿಯ ಗ್ರಾಮಸ್ಥರುಗಳ ವಾಹನಗಳ ಚಾಲನೆಗೆ ಮತ್ತು ಅಕ್ಕ ಪಕ್ಕದ ಜಮೀನಿನಲ್ಲಿ ಉಳುಮೆ ಮಾಡಲು ಟ್ರಾಕ್ಟರ್ ಗಳ ಚಾಲನೆಗೂ ಕಷ್ಟಕರವಾಗಿದೆ, ಈಗಾಗಲೇ ಕ್ಷೇತ್ರದ ಶಾಸರಿಗೆ, ಮತ್ತು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರಿಗೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿರುತ್ತಾರೆ.
ಈ ವ್ಯಾಪ್ತಿಯ ಗ್ರಾಮಸ್ಥರಿಗೆ, ರೈತರಿಗೆ ಬಾರಿ ತೊಂದರೆಗಳು ಅಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಕಿರು ಸೇತುವೆಯ ದುರಸ್ತಿಗೆ ತುರ್ತಾಗಿ ಕಾಮಗಾರಿಯನ್ನು ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರಾದ ನಿವೃತ್ತ ಪೋಲಿಸ್ ಅಧಿಕಾರಿ ಕುಶಾಲಪ್ಪ, ಚೇತನ್, ಮಂಜುನಾಥ ಸೇರಿದಂತೆ ಹಲವಾರು ಗ್ರಾಮಸ್ಥರು ಒತ್ತಾಯ ಮಾಡಿರುತ್ತಾರೆ.
Back to top button
error: Content is protected !!