ಕಾರ್ಯಕ್ರಮ

ಕೂಡುಮಂಗಳೂರು ಗ್ರಾಪಂ ನಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

ಕುಶಾಲನಗರ, ಸೆ 20: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಂಜೀವಿನಿ ಒಕ್ಕೂಟದ ಸಂಘಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಅಭಿನಂದನೆ ಸಲ್ಲಿಸಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್. ಕಳೆದ ಬಾರಿ ಚುನಾವಣೆಯ ಸಮಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರಿಗಾಗಿ ರಂಗೋಲೆ ಸ್ಪರ್ಧೆ ಏರ್ಪಡಿಸಿದ ಸಂದರ್ಭ ಆರು ಮಹಿಳೆಯರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ. ನಮ್ಮ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲು ಸಂಜೀವಿನಿ ಒಕ್ಕೂಟ ಹತ್ತು ಸಂಘವನ್ನು ಮಾಡಿದ್ದು ಇವಾಗ 40ಕ್ಕೂ ಹೆಚ್ಚು ಸಂಘಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಸಂಘದಲ್ಲಿ ಮಹಿಳೆಯರು ತೆಗೆದುಕೊಂಡ ಹಣದಲ್ಲಿ ಅವರು ಗಂಧದ ಕಡ್ಡಿ ಮೇಣದಬತ್ತಿ ಫೆನಾಯಿಲ್ ಇನ್ನೂ ಹಲವಾರು ಸ್ವಾವಲಂಬಿ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ ಇನ್ನು ಉತ್ತಮ ರೀತಿಯಲ್ಲಿ ಇದೇ ರೀತಿ ಸಂಘಗಳನ್ನು ಬೆಳೆಸಿಕೊಂಡು ಬರಬೇಕೆಂದು ಮನವಿ ಮಾಡಿದರು.
ನಂತರ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ. ನಮ್ಮ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಂಜೀವಿನಿ ಒಕ್ಕೂಟದ ಸಂಘಗಳು ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕೆಂದು ಮಹಿಳೆಯರಿಗೆ ಕರೆ ನೀಡಿದರು. ಸಂಜೀವಿನಿ ಒಕ್ಕೂಟದಿಂದ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಸಂಘಕ್ಕೆ ಹಣ ಬಿಡುಗಡೆ ಮಾಡಿ ಅವರಿಗೆ ಚೆಕ್ಕು ವಿತರಣೆ ಮಾಡಲಾಯಿತು. ಅನ್ನಪೂರ್ಣೇಶ್ವರಿ ಕೂಡ್ಲೂರು ಗ್ರಾಮಕ್ಕೆ 1.50,000 . ಶುಭಂ ಹಾರಂಗಿ ಸಂಘಕ್ಕೆ 1.50,000 ಹಾಗೂ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಬಸವನತೂರು ಸಂಘಕ್ಕೆ 1.50,000. ಧನಲಕ್ಷ್ಮಿ ಸ್ವಸಹಾಯ ಸಂಘ ಹಾರಂಗಿ ಸಂಘಕ್ಕೆ 75,000. ಭುವನೇಶ್ವರಿ ಶ್ರೀ ಶಕ್ತಿ ಸ್ವಸಹಾಯ ಸಂಘ ಬಸವನತ್ತೂರು 1.50,000 .
ರೂಗಳನ್ನು ಎಲ್ಲಾ ಸಂಘಗಳಿಗೆ ನೀಡಿ ಇದನ್ನು ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಗಣ್ಯರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ ಸಂಘದ. ಅಧ್ಯಕ್ಷರಾದ ಶಾರದಮ್ಮ ಕೆ ಎಸ್. ಕಾರ್ಯದರ್ಶಿ ಸವಿತಾ. ಎಂ ಬಿ ಲಕ್ಷ್ಮಿ. ಕೃಷಿ ಸಖಿ ಸೋನಿಕ. ಎನ್ ಆರ್ ಎಲ್ ಎಮ್ ನ ಮೇಲ್ವಿಚಾರಕರಾದ ಪದ್ಮಶ್ರೀ. ಹಾಗೂ 10ಕ್ಕೂ ಹೆಚ್ಚು ಸಂಘಗಳ ಮಹಿಳೆಯರು ಹಾಜರಿದ್ದರು ಮತ್ತು ಪಂಚಮುಖಿ ಶ್ರೀ ಶಕ್ತಿ ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು…

Related Articles

Leave a Reply

Your email address will not be published. Required fields are marked *

Back to top button
error: Content is protected !!