ಕುಶಾಲನಗರ, ಸೆ 18: ಹಾಲು ಉತ್ಪಾದಕರ ಸಂಘಗಳಿಂದಾಗಿ ಗ್ರಾಮೀಣ ಪ್ರದೇಶಗಳ ಅನೇಕ ಮನೆಗಳು ಬೆಳಕಾಗುತ್ತಿವೆ ಎಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತಕುಮಾರ್ ಹೇಳಿದರು.
ಮದಲಾಪುರದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಹೈನುಗಾರಿಕೆಗೆ ಮೊದಲ ಆದ್ಯತೆ ನೀಡಬೇಕು. ಹಾಲು ಉತ್ಪಾದಕ ಸಂಘಕ್ಕೆ ಹೆಚ್ಚು ಹಾಲು ಹಾಕುವ ಮೂಲಕ ಸಂಘದೊಂದಿಗೆ ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕೆಂದು ಗುಣಮಟ್ಟದ ಹಾಲನ್ನು ಡೈರಿಗೆ ಸರ್ವರಾಜು ಮಾಡುವ ಮೂಲಕ ಉತ್ತಮ ಲಾಭ ಪಡೆಯಬಹುದು ಎಂದು ಹೇಮಂತಕುಮಾರ್ ಕರೆಕೊಟ್ಟರು.
ಹೈನು ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕರು ತಮ್ಮಲ್ಲಿನ ಪ್ರತಿಷ್ಠೆಗಳನ್ನು ಬಿಟ್ಟು ತಿಂಗಳಿಗೊಮ್ಮೆ ಸಂಘದಲ್ಲಿ ಸಭೆ ಸೇರಿ ಸಂಘದ ಅಭಿವೃದ್ದಿಗೆ ಪರಸ್ಪರ ಚರ್ಚಿಸಿ ಕಾರ್ಯೋನ್ಮುಖರಾಗಬೇಕೆಂದು ಹೇಮಂತಕುಮಾರ್ ಕರೆ ನೀಡಿದರು.
ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಸುನಿಲ್ ರಾವ್ ಮಾತನಾಡಿ, ಹಿಂದಿನವರು ಬಹಳ ದೂರದೃಷ್ಟಿಯನ್ನು ಇಟ್ಟು ಆರಂಭಿಸಿರುವ ಮದಲಾಪುರದ ಹಾಲು ಉತ್ಪಾದಕ ಸಂಘವನ್ನು ಅಭಿವೃದ್ದಿ ಪಡಿಸಲು ಸಂಘದ ವ್ಯಾಪ್ತಿಯ ಎಲ್ಲಾ ರೈತರು ತಪ್ಪದೇ ನಮ್ಮ ಸಂಘಕ್ಕೆ ಹಾಲು ಹಾಕಬೇಕೆಂದು ಮನವಿ ಮಾಡಿದರು. ನನ್ನ ತಂದೆಯವರ ಅವಧಿ ಹಾಗೂ ನನ್ನ ಅವಧಿಯಲ್ಲಿ ಯಾವುದೇ ಕಳಂಕ ಇಲ್ಲದೆ ಅತಿ ಹೆಚ್ಚು ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಂಘದ ಅಭಿವೃದ್ಧಿಯಲ್ಲಿ ಪಾತ್ರವಹಿಸುತ್ತಿದ್ದೇವೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ
ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ.ವೀಣಾ ಮಾತನಾಡಿ, ಮದಲಾಪುರ ಹಾಲು ಉತ್ಪಾದಕರ ಸಂಘಕ್ಕೆ ಉತ್ತಮವಾಗಿ ರೈತರು ಹಾಲನ್ನು ಸಂಗ್ರಹವಾಗುತ್ತಿದೆ.
ಸಂಘದ ಬೈಲಾದ ಪ್ರಕಾರ ವ್ಯಾಪ್ತಿಯನ್ನು ಹೊರತು ಪಡಿಸಿ ಬೇರೆ ಸಂಘಗಳಿಗೆ ಹಾಲು ಹಾಕುವಂತಿಲ್ಲ. ಆದಾಗ್ಯೂ ಮದಲಾಪುರ ವ್ಯಾಪ್ತಿಯ ಹೈನು ಕೃಷಿಕರು ಸಂಘದ ಅಭಿವೃದ್ದಿಯನ್ನು ಗಮನದಲ್ಲಿಟ್ಟು ಈ ಸಂಘಕ್ಕೆ ಹಾಲನ್ನು ಹಾಕಬೇಕೆಂದು ಕೋರಿದರು.
ಅತೀ ಹೆಚ್ಚು ಹಾಲು ಹಾಕಿದ ತಮ್ಮಯ್ಯ, ಸುರೇಶ್,ದೇವೀರಮ್ಮ, ಕೃಷ್ಣ ಹಾಗೂ ವೆಂಕಟಯ್ಯ ನಾಯಕ ಅವರನ್ನು ಮಹಾಸಭೆಯಲ್ಲಿ ಗುರುತಿಸಿ ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಉಪಸ್ಥಿತರಿತ ಎಸ್ ಆರ್ ಸುನಿಲ್ ರಾವ್ ಅಧ್ಯಕ್ಷರು.
ಸಂಘದ ಉಪಾಧ್ಯಕ್ಷ ಪುಟ್ಟಣ್ಣಯ್ಯ, ನಿರ್ದೇಶಕರಾದ ತಮ್ಮಯ್ಯ, ಸುರೇಶ, ದೇವೀರಮ್ಮ, ದೇವರಾಜು, ವೈರಮುಡಿ .ದೇವಯ್ಯ ಇದ್ದರು.
ಕಾರ್ಯದರ್ಶಿ ಎಂ.ಎನ್.ಯೋಗೇಶ ಸ್ವಾಗತಿಸಿದರು..
Back to top button
error: Content is protected !!