ಕಾರ್ಯಕ್ರಮ

ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ಕುಶಾಲನಗರ, ಜು 20:ಕುಶಾಲನಗರದಲ್ಲಿ ಸತ್ಕಾರ್ಯ ಹೊಸ ಗೃಹ ಮಂಡಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಕಾರ್ಯಕಾರಿ ಮಂಡಳಿ ಪದಗ್ರಹಣ ಕಾರ್ಯಕ್ರಮ ನಡೆಯಿತು.

ವಾರ್ಡ್ ನಂ 15 ರ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಉದ್ಘಾಟಿಸಿದರು.

ಪುರಸಭೆಯ ವಾರ್ಡ್ ಸದಸ್ಯ ಎಂ.ಕೆ.ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಖಚಾಂಚಿ ರೇಣುಕಾಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಉದ್ದೇಶ ವಿವರಿಸಿದರು. ಬಡಾವಣೆ ಪ್ರಗತಿಗೆ ಎಲ್ಲರೂ ಒಗ್ಗೂಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲು ಕೋರಿದರು.

ಇದೇ ಸಂದರ್ಭ ಬಡಾವಣೆಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣ, ಬೋರ್ಡ್ ಅಳವಡಿಕೆ, ವಾಕಿಂಗ್ ಪಾಥ್ ನಿರ್ಮಾಣ, ರಸ್ತೆ ಅಭಿವೃದ್ಧಿ, ಕಾಡು ಗಿಡಗಳ ತೆರವು, ಖಾಲಿ ಸೈಟ್ ಸ್ವಚ್ಚತೆ, ರಾತ್ರಿ ಪೊಲೀಸ್ ಬೀಟ್ ವ್ಯವಸ್ಥೆ ಮತ್ತಿತರರ ಬೇಡಿಕೆ ಒಳಗೊಂಡ ಮನವಿಯನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷ ಎನ್.ಕೃಷ್ಣಮೂರ್ತಿ, ಕಾರ್ಯದರ್ಶಿ ಪಿ.ಎ.ಉತ್ತಪ್ಪ,ಜಂಟಿ ಕಾರ್ಯದರ್ಶಿ ಚಂದ್ರಶೇಖರ್ ಬಿ.ಕೆ, ಸದಸ್ಯರಾದ ಪರಮೇಶ್ ಎನ್.ಬಿ, ಲೋಕೇಶ್ ಎನ್, ರುಕ್ಮಾಂಗದ ಎಸ್.ಆರ್, ಲೋಕೇಶ್ ಬಿ.ಬಿ, ರಮೇಶ್, ದೇವಯ್ಯ ಬಿ.ಬಿ, ಸುಬ್ರಮಣಿ ಪಿ.ಪಿ, ಮಂಜುನಾಥ್ ಕೆ.ಎಸ್, ಪ್ರವೀಣ್ ಧರ್ಮಾನಂದ ಬಿ.ಎಸ್, ಸತೀಶ್ ಕುಮಾರ್ ಎಸ್‌.ಎಂ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!