ಕುಶಾಲನಗರ, ಸೆ. 17: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಸೀಗೆಹೊಸೂರು -ಸೋಮವಾರಪೇಟೆಗೆ ನೂತನ ಬಸ್ ಮಾರ್ಗಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ, ಸೀಗೆಹೊಸೂರು ಅಬ್ಬೂರುಕಟ್ಟೆಯ ಮಾರ್ಗವಾಗಿ ಸೋಮವಾರಪೇಟೆಗೆ ತೆರಳಲು ಸರಕಾರಿ ಬಸ್ ವ್ಯವಸ್ಥೆ ಹೊಂದಿಲ್ಲದ ಈ ವ್ಯಾಪ್ತಿಯ 10 ಗ್ರಾಮಗಳ ಗ್ರಾಮಸ್ಥರಿಗೆ ಬೇಡಿಕೆ ಈಡೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ರಸ್ತೆ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಬಹುಮುಖ್ಯವಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪೈಕಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅತ್ಯಂತ ಉಪಕಾರಿಯಾಗಿದೆ ಎಂದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಗ್ರಾಮಾಂತರ
ಪ್ರದೇಶದ ಸಾರ್ವಜನಿಕರು ಸರಕಾರದ ವಿವಿಧ ಯೋಜನೆ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ.ಗಿರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರುಗಳಾದ ಟಿ.ಪಿ ಹಮೀದ್, ಅನಂತ್, ಶಿವಕುಮಾರ್, ಚಂದ್ರು, ನೆರಗಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿನೋದ ಕುಮಾರ್, ಸ್ಥಳೀಯ ಗ್ರಾಮಗಳ ಪ್ರಮುಖರಾದ ಲೋಕೇಶ್, ಕೊತ್ತನಹಳ್ಳಿ ಅರುಣ್ ಕುಮಾರ್, ಹೊಸಹಳ್ಳಿ ಸತೀಶ್, ರತನ್, ಮಡಿಕೇರಿ ಬಸ್ ಘಟಕದ ವ್ಯವಸ್ಥಾಪಕ ಎಂ. ಮಹಬೂಬ್ ಅಲಿ, ಸಹಾಯಕ ಸಂಚಾರಿ ಅಧೀಕ್ಷಕ ಈರಸಪ್ಪ, ಕೆ.ಪಿ.ಸಿ.ಸಿ ಸದಸ್ಯ ನಟೇಶ್ ಗೌಡ, ಜಿಲ್ಲಾ ಐ.ಎನ್ ಟಿ ಯು ಸಿ ಅಧ್ಯಕ್ಷ ಬಿ.ಡಿ.ಅಣ್ಣಯ್ಯ ಸೇರಿದಂತೆ ರಸ್ತೆ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ವತಿಯಿಂದ ಶಾಸಕ ಡಾ. ಮಂತರ್ ಗೌಡ, ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಅನಂತ ಅವರನ್ನು ಸನ್ಮಾನಿಸಲಾಯಿತು.
Back to top button
error: Content is protected !!