ಕುಶಾಲನಗರ, ಸೆ 15: ಎತ್ತಿನ ಗಾಡಿ ಹಿಂಬದಿಗೆ ವಾಲಿ ಅದರ ಕೆಳಗೆ ಸಿಲುಕಿದ ಬಾಲಕನೊಬ್ಬ ಗಾಯಗೊಂಡು ಮೃತಪಟ್ಟ ಘಟನೆ ತೊರೆನೂರಿನಲ್ಲಿ ನಡೆದಿದೆ.
ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಪ್ರೌಢಶಾಲೆಯ ಬಳಿ ನಿವಾಸಿ ಟಿ.ಆರ್.ಮಧು ಮತ್ತು ಅನು ದಂಪತಿ ಪುತ್ರ ಟಿ.ಎಂ.ತರುಣ್ ( 7 ವರ್ಷ )
ಮೃತ ದುರ್ದೈವಿ.
ವಿದ್ಯಾರ್ಥಿಯು ಭಾನುವಾರ ಬೆಳಿಗ್ಗೆ ತಮ್ಮ ಮನೆಯ ಬಳಿ ಶುಂಠಿ ಚೀಲಗಳನ್ನು ತುಂಬಿ ನಿಲ್ಲಿಸಿದ್ದ ಎತ್ತಿನ ಗಾಡಿಯ ಕೆಳಗ್ಗೆ ನಿಂತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಶುಂಠಿ ತುಂಬಿದ್ದ ಎತ್ತಿನ ಗಾಡಿಯ ಹಿಂಭಾಗ ಬಾಲಕ ಹಿಡಿದು ನೇತಾಡಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಭಾರ ಹೆಚ್ಚಾಗಿ ಗಾಡಿಯು ಹಿಂಬದಿಗೆ ವಾಲಿ ವಿದ್ಯಾರ್ಥಿ ತರುಣ್ ತಲೆಗೆ ತೀವ್ರಪೆಟ್ಟಾಗಿ ರಕ್ತಸ್ರಾವವಾಗಿದ್ದು, ತಕ್ಷಣದಲ್ಲಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ತರುಣ್ ಮೃತಪಟ್ಟಿರುತ್ತಾನೆ.
ಈ ಕುರಿತ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!