ಕಾಮಗಾರಿ

ರಾಜ್ಯ ಸರಕಾರ ಶೆ.100 ರಷ್ಟು ಸುಭ್ರದವಾಗಿದೆ: ಸಚಿವ ರಾಮಲಿಂಗಾರೆಡ್ಡಿ

ಸಾರಿಗೆ ಸಂಸ್ಥೆ ಲಾಭ ಗಳಿಸುತ್ತಿದೆಯೋ‌ ಇಲ್ಲವೋ ಎಂಬುದು ಮುಖ್ಯವಲ್ಲ. ರಾಜ್ಯದ ಜನತೆಗೆ ಉತ್ತಮ ಸೇವೆ ಒದಗಿಸುವುದು‌ ನಮ್ಮ ಮುಖ್ಯ ಗುರಿ-ರಾಮಲಿಂಗಾರೆಡ್ಡಿ

ಕುಶಾಲನಗರ, ಸೆ 11: ರಾಜ್ಯ ಸರಕಾರ ಶೆ. 100 ರಷ್ಟು ಸುಭ್ರದವಾಗಿದ್ದು ಯಾವುದೇ ರೀತಿಯ ಗೊಂದಲ ಬೇಡ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ
ಬಸವನಹಳ್ಳಿ ಬಳಿ‌ ನಿರ್ಮಾಣ ಹಂತದಲ್ಲಿರುವ ಸಾರಿಗೆ ಬಸ್ ಡಿಪೋ‌ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಸಚಿವರು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಾರಿಗೆ ಸಂಸ್ಥೆ ಲಾಭ ಗಳಿಸುತ್ತಿದೆಯೋ‌ ಇಲ್ಲವೋ ಎಂಬುದು ಮುಖ್ಯವಲ್ಲ. ರಾಜ್ಯದ ಜನತೆಗೆ ಉತ್ತಮ ಸೇವೆ ಒದಗಿಸುವುದು‌ ನಮ್ಮ ಮುಖ್ಯ ಗುರಿ, ಗ್ಯಾರೆಂಟಿ ಯೋಜನೆಗಳು ಮುಂದಿನ 10 ವರ್ಷಗಳು ಕೂಡ ನಿರಾತಂಕವಾಗಿ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಗುಂಡುರಾಯರ ಅವಧಿಯಲ್ಲಿ ಕುಶಾಲನಗರದಲ್ಲಿ ಸಾರಿಗೆ ನಿಲ್ದಾಣ ಸ್ಥಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಿಪೋ ಸ್ಥಾಪನೆಗೆ ಪ್ರಮುಖ‌ ಬೇಡಿಕೆ ವ್ಯಕ್ತಗೊಂಡಿತ್ತು. ಈ ಹಿನ್ನಲೆಯಲ್ಲಿ
ಬಸವನಹಳ್ಳಿಯಲ್ಲಿ 4 ಎಕರೆ ಪ್ರದೇಶದಲ್ಲಿ 8 ಕೋಟಿ‌ ವೆಚ್ಚದಲ್ಲಿ ಡಿಪೋ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮಾರ್ಚ್ ನಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ‌ಜನರ ಬೇಡಿಕೆಯಂತೆ
ಶಾಸಕ ಡಾ.ಮಂತರ್ ಗೌಡ ಅವರು ಹೆಚ್ಚುವರಿ ಬಸ್ ಗಳಿಗೆ ಸಲ್ಲಿಸಿದ ಕೋರಿಕೆಯಂತೆ ಕೆಲವು ಬಸ್ ಗಳನ್ನು ಒದಗಿಸಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಇದೇ ಸಂದರ್ಭ
ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ‌ ನಿರ್ವಹಿಸುವಂತೆ ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.

ಗುತ್ತಿಗೆದಾರ ಚಂದ್ರೇಗೌಡ‌ ಮಾತನಾಡಿ, ಈಗಾಗಲೆ ಡಿಪೋ ಆವರಣ ಗೋಡೆ‌ ನಿರ್ಮಾಣಗೊಂಡಿದ್ದು ಅರಣ್ಯ ಇಲಾಖೆಯಿಂದ ಮರಗಳ ತೆರವು‌ ಕಾರ್ಯ ಪ್ರಗತಿಯಲ್ಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕುಶಾಲನಗರ ಪಟ್ಟಣ ಶೈಕ್ಷಣಿಕವಾಗಿ, ಪ್ರವಾಸೋದ್ಯಮ ಹಾಗೂ ಔದ್ಯೋಗಿಕವಾಗಿ ವಿಸ್ತಾರವಾಗಿ ಬೆಳೆದಿದೆ. ಈ‌ ಹಿನ್ನಲೆಯಲ್ಲಿ ಸಾರಿಗೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು. ನೆಲ ಅಂತಸ್ತು ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ
ಉನ್ನತೀಕರಣಗೊಳಿಸಬೇಕಿದೆ.
ಸಾರಿಗೆ ಬಸ್ ವರ್ಕ್ ಶಾಪ್, ಕುಶಾಲನಗರ ಕೇಂದ್ರವಾಗಿಸಿ ವಿಭಾಗೀಯ ಕಛೇರಿ ಸ್ಥಾಪಿಸಬೇಕಿದೆ ಎಂದು ಆಗ್ರಹಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಸಚಿವರಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭ ಬಸ್ ಸೌಕರ್ಯ ದೊರಕಿದ ಗ್ರಾಮದ ಪ್ರಮುಖರು ಸಚಿವರು ಹಾಗೂ ಶಾಸಕ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕಾಂಗ್ರೆಸ್ ಪ್ರಮುಖರಾದ ಲೋಕೇಶ್, ಟಿ.ಪಿ.ಹಮೀದ್, ಕಿರಣ್, ಕೃಷ್ಣೇಗೌಡ, ಸುನಿತಾ, ಅರುಣ್ ರಾವ್, ಬಿ.ಡಿ.ಅಣ್ಣಯ್ಯ, ಜಗದೀಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!