ಮನವಿ

ಶನಿವಾರಸಂತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣ ಕಲ್ಪಿಸಲು ಸಾರಿಗೆ ಸಚಿವರಿಗೆ ಮನವಿ

ಕುಶಾಲನಗರ, ಸೆ 11: ಶನಿವಾರಸಂತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಪ್ರಯಾಣಿಕರಿಗೆ ಸುಸಜ್ಜಿತ ತಂಗುದಾಣ ವ್ಯವಸ್ಥೆ ಕಲ್ಪಿಸುವಂತೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಶನಿವಾರಸಂತೆಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಕಾರ್ಯದರ್ಶಿ ಜನಾರ್ಧನ್ ಪ್ರಭು, ಪದಾಧಿಕಾರಿಗಳಾದ ದಿವಿನ್ ದೇವಯ್ಯ, ಜಯಂತ್, ಸುರೇಶ್, ಕೆ.ಪಿ.ಜನಾರ್ದನ, ಜಗದೀಶ್ ಕಿನಿ, ನಂದಕುಮಾರ್, ಸತೀಶ್ ಹಾಗೂ ಪ್ರಸಾದ್ ಅವರು, ಶನಿವಾರಸಂತೆಯಲ್ಲಿ ಪ್ರಸಕ್ತ ಅವ್ಯವಸ್ಥೆ, ನಿಲ್ದಾಣದ ಕೊರತೆ ಬಗ್ಗೆ ಸಚಿವರ ಗಮನ ಸೆಳೆದು, ತಮ್ಮ ಬೇಡಿಕೆಯ ಬಗ್ಗೆ ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!