ಮಡಿಕೇರಿ ಸೆ 04: ಫೀಲ್ಡ್ ಮಾರ್ಷಲ್ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಕೊಠಡಿಗಳು ಮತ್ತು ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಮತ್ತು ಕಂಪ್ಯೂಟರ್ ಲ್ಯಾಬ್ ಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನೋಡಿ ಕೊಠಡಿಗಳಲ್ಲಿ ನೀರು ಸುರಿಯುತ್ತಿದ್ದು ತಕ್ಷಣ ಕೊಠಡಿಗಳ ನವೀಕರಣ ಆಗಬೇಕು ನಾನು ಮತ್ತು ಕುಲಪತಿ ಗಳ ಜೊತೆ ಗೂಡಿ ಸ್ಥಳೀಯ ಶಾಸಕರಾದ ಮಂಥರ್ ಗೌಡ ಹಾಗೂ ಮುಖ್ಯ ಮಂತ್ರಿಗಳು ಕಾನೂನು ಸಲಹೆ ಗಾರರು ಮತ್ತು ವಿರಾಜಪೇಟೆ ಶಾಸಕರಾದ ಪೊನ್ನಣ್ಣ ಮತ್ತು ವಿಧಾನ ಪರಿಷತ್ ಸದಸ್ಯರ ಹಾಗೂ ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯರರಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪರಿಸ್ಥಿತಿಯನ್ನ ತಿಳಿಸಿ ಸರ್ಕಾರದಿಂದ ನೆರವನ್ನ ಕಲ್ಪಿಸುತ್ತೇವೆ.
ಈ ಕಾಲೇಜಿಗೆ ತುಂಬಾ ಚರಿತ್ರೆ ಇರುವುದರಿಂದ 75ನೇ ಸುವರ್ಣ ಮಹೋತ್ಸವ ಆಚರಿಸುವ ಸನಿಹ ಹತ್ತಿರ ಆಗುತ್ತಿದ್ದು. ಅದರಿಂದ ಸರ್ಕಾರಕ್ಕೆ ಗಮನ ತಂದು ಸರಿಪಡಿಸುತ್ತೇನೆ ಕೊಡಗಿನ ಜಿಲ್ಲೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ಕೊಡುವಲ್ಲಿ ಕೊಡಗು ವಿಶ್ವವಿದ್ಯಾಲಯ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತದೆ.
ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ಇರುತ್ತದೆ ಅಂತಹ ಸೌಲಭ್ಯಗಳನ್ನ ಸರ್ಕಾರ ಮಟ್ಟದಲ್ಲಿ ಗಮನ ಸೆಳೆದು ಕಲ್ಪಿಸಲಾಗುವುದು. ಹಾಗೂ ಪರೀಕ್ಷೆಗಳನ್ನ ಕಟ್ಟುನಿಟ್ಟಾಗಿ ನಡೆಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇಗಬೇಗನೆ ಮೌಲ್ಯಮಾಪನ ಮಾಡಿಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುತ್ತೇನೆ ಎಂದು ನೂತನ ಕುಲ ಸಚಿವ (ಮೌಲ್ಯಮಾಪನ ) ಪ್ರೊಫೆಸರ್ ಸುರೇಶ ಹೇಳಿದರು,
ನೂತನ ಕುಲ ಸಚಿವರಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಪ್ರಥಮವಾಗಿ ಭೇಟಿ ನೀಡಿದ್ದರಿಂದ ಪ್ರಾಂಶುಪಾಲರಾದ ಮೇಜರ್ ಡಾ.ರಾಘವಾ.ಬಿ ಮತ್ತು ಪ್ರಾಧ್ಯಾಪಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಯೋಜಕರಾದ ಡಾ. ರವಿಶಂಕರ್ ಡಾ. ತಿಪ್ಪೇ ಸ್ವಾಮಿ, ಡಾ ನಾಗರಾಜ್ ಕೆ.ಟಿ, ಡಾ. ಎಂ ಪಿ ಕೃಷ್ಣ, ಡಾ. ಮಂಜುನಾಥ್. ಡಾ ಅರುಣ್ ಕುಮಾರ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರು ಬೋಧಕೇತರ ವರ್ಗದವರು,ಉಪಸ್ಥಿತರಿದ್ದರು.
Back to top button
error: Content is protected !!