ಕಾರ್ಯಕ್ರಮ

ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಕೆ.ವೆಂಕಟೇಶ್

ಪಿರಿಯಾಪಟ್ಟಣ, ಸೆ 04:ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಧೋರಣೆ, ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ತಾಲೂಕಿನ ಕೆ.ಬಸವನಹಳ್ಳಿ, ಕಣಗಾಲ್, ಅಂಬ್ಲಾರೆ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನದಿ ಪ್ರಾಂತ್ಯದ ಪ್ರದೇಶದಲ್ಲಿ ಹೆಚ್ಚಿನ ಭಾಗದ ರೈತರು ಭತ್ತದ ನಾಟಿ ಕಾರ್ಯ ಆರಂಭಿಸಿದ್ದಾರೆ ಹಾಗಾಗಿ ಭತ್ತದ ಬೆಳೆಗೆ ನೀರಿನ ಅಭಾವ ಮಾಡಬಾರದು ಜೊತೆಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬೆಣಗಾಲು ಸ್ಮಶಾನ ಕಟ್ಟೆಗೆ ಹೋಗಲು ರಸ್ತೆ ಇಲ್ಲದೆ ತುಂಬಾ ತೊಂದರೆಯಾಗಿದೆ ಒತ್ತುವರಿ ಮಾಡಿಕೊಂಡಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆ ತೆರವುಗೊಳಿಸಿ ಎಂದು ಹಲವಾರು ಬಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಈ ಭಾಗದಲ್ಲಿ ವಿದ್ಯುತ್ ರಾತ್ರಿ ವೇಳೆ ಹೋದರೆ ಬೆಳಿಗ್ಗೆ 10 ಗಂಟೆ ತನಕ ಕರೆಂಟ್ ಇಲ್ಲದೆ ತೊಂದರೆ ಆಗಿದೆ ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸರಿಪಡಿಸಿ ಕೊಡಬೇಕೆಂದು ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು. ಚೆನ್ನಕಲ್ ಕಾವಲ್ ಗ್ರಾಮದಲ್ಲಿ ಸರ್ವೆ ನಂಬರ್ 30 ರಲ್ಲಿ 4,000 ಎಕರೆ ಭೂಮಿ ಪೋಡಿ ಯಾಗದೆ ಇಲ್ಲಿಯ ಕೆಲವರ ಪ್ರಭಾವಿಗಳಿಂದ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಪೋಡಿ ಕಾರ್ಯ ನಡೆಸಿ ಕೊಡಬೇಕೆಂದು ಎಂದರು.
ಗ್ರಾಮಸ್ಥರ ಮಾತನ್ನು ಆಲಿಸಿದ ಸಚಿವರು ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ಕರೆಯಿಸಿ ಬೆಣಗಾಲು ಬೋವಿ ಕಾಲೋನಿಗೆ ಕೂಡಲೇ ಒಂದು ಬೋರ್ ವೆಲ್ ಕೊರೆಸಿ ಕೂಡಲೇ ಗ್ರಾಮ ಪಂಚಾಯತಿ ವತಿಯಿಂದ ಪೈಪ್ಲೈನ್ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿದ್ಯುತ್ ಸಮಸ್ಯೆ ಸರಿಪಡಿಸಬೇಕೆಂದು ಸೂಚಿಸಿದರು.
ಹಾರಂಗಿ ಇಲಾಖೆ ವತಿಯಿಂದ ಬೆಣಗಾಲು. ಮಂಟಿಕೊಪ್ಪಲು. ಹಾರನಹಳ್ಳಿ. ಅಂಬಲಾರೆ. ಸೇರಿದಂತೆ ಒಂಬತ್ತು ಹಳ್ಳಿಗಳ ರಸ್ತೆ ಅಭಿವೃದ್ಧಿಗೆ 10 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಓ ಸುನಿಲ್ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಬಿಇಒ ರವಿ ಪ್ರಸನ್ನ, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್, ಸಿಡಿಪಿಒ ಮಮತಾ, ಆರ್ಎಫ್ಓ ಪದ್ಮಿನಿ, ಎಇಇಗಳಾದ ದಿನೇಶ್, ಮಲ್ಲಿಕಾರ್ಜುನ್, ಮುಖಂಡರಾದ ರೆಹಮತ್ ಜಾನ್ ಬಾಬು, ಎನ್.ಎಸ್.ಭುಜಂಗ, ಚೆನ್ನಕಲ್ ಶೇಖರ್, ಎಂ.ಬಿ.ಶಿವಕುಮಾರ್. ಅಸ್ಲಾಂ ಪಾಷಾ , ಧನರಾಜ್, ರಿಯಾಜ್. ಪುಟ್ಟರಾಜ್, ಯೋಗೇಶ್, ಅರವಿಂದರಾಜ ಅರಸು,
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!