ಮನವಿ

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೋಕಿನ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸಲು ಮನವಿ

ಅವರ್ತಿ ಮಾರ್ಗವಾಗಿ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಿಲ್ದಾಣ ಮಾಡಲು ಆಗ್ರಹ

ಕುಶಾಲನಗರ, ಆ 27:  ಕುಶಾಲನಗರವು ಕೊಡಗು ಜಿಲ್ಲೆಯಲ್ಲಿಯೇ ಅತೀ ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿದ್ದು  ಮಾಜಿ ಮುಖ್ಯಮಂತ್ರಿಗಳಾದ ದಿವಂಗತ  ಆರ್.ಗುಂಡೂರಾವ್‌ರವರ ಜನ್ಮ ಭೂಮಿಯಾಗಿರುತ್ತದೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೋಕಿನ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವುದರಿಂದ ಪ್ರವಾಸೋದ್ಯಮಕ್ಕೆ ಮತ್ತು ಕಾಫಿ, ಏಲಕ್ಕಿ, ಸಾಂಬಾರ ಪದಾರ್ಥಗಳು ಇವುಗಳ ಸರಕುಸಾಗಣೆಗೆ ಅನುಕೂಲವಾಗುವುದಿರುತ್ತದೆ. ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ಈಗಾಗಲೇ ಸರ್ವೆ ನಡೆದಿರುವಂತೆ ಈ ಯೋಜನೆಯನ್ನು ಹೊಸ ಅಂದಾಜು ಯೋಜನಾ ಪಟ್ಟಿಯನ್ನು ತಯಾರಿಸಿ,ಕೇಂದ್ರ ಬಡ್ಡೆಟ್ ನಲ್ಲಿ ಕಾಯ್ದಿರಿಸಿದ್ದು, ಕೊಡಗು ಜಿಲ್ಲೆಯ ಜನತೆಯ ಪರವಾಗಿ ರೈಲ್ವೆ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವಂತೆ ಮಾಡಬೇಕೆಂದು ಕುಶಾಲನಗರದ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ
ಆರ್.ಕೆ.ನಾಗೇಂದ್ರ ಬಾಬು,
ಪುರಸಭೆ ಸದಸ್ಯ ಆನಂದ್,
ಜೆಡಿಎಸ್ ಮುಖಂಡರಾದ ವಸಂತ,
ಗಿರೀಶ್ ಅವರು ಸಂಸದ ಯದುವೀರ್ ಒಡೆಯರ್ ಗೆ ಮನವಿ ಸಲ್ಲಿಸಿದರು.

ಈಗಾಗಲೇ ಮೈಸೂರು ಕುಶಾಲನಗರ ಸರ್ವೆ ಕಾರ್ಯ ಮುಗಿದಿದ್ದು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡ ಪಕ್ಷಕ್ಕೆ ಸುಮಾರು 26 ಕಿ.ಮೀ. ದೂರದಲ್ಲಿರುವ ಸಾಲಿಗ್ರಾಮಕ್ಕೆ ಅಥವಾ ಕೊಣನೂರು, ಅರಕಲಗೂಡು, ಹೊಳೆನರಸಿಪುರಮಾರ್ಗವನ್ನು ತೆಗೆದುಕೊಂಡರೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನೂಕೂಲವಾಗುವುದರ ಜೊತೆಗೆ, ಮೂರುಜಿಲ್ಲೆಗಳ ಸಾರಿಗೆ ದಾರಿ ಜೋಡಣೆಯಾಗುವುದಿರುತ್ತದೆ. ಈಗಾಗಲೇ ರೈಲ್ವೆ ನಿಲ್ದಾಣವನ್ನು ಮೈಸೂರು ಜಿಲ್ಲೆಯ ಹಾರಹಳ್ಳಿ ಹೋಬಳಿಯ ಬೈಲುಕೊಪ್ಪದ ಬಳಿಯ [ ಗೋಲ್ಡನ್ ಟೆಂಪಲ್] ಗಿರಗೂರಿಗೆ ಮಾಡಬೇಕೆಂದು ಪ್ರಸ್ತಾವನೆ ಇರುತ್ತದೆ. ಅಲ್ಲಿ ನಿಲ್ದಾಣ ಮಾಡಿದರೆ ನಿಸರ್ಗಧಾಮಕ್ಕೆ ತೊಂದರೆಯಾಗುತ್ತದೆ.

ಈ ಮಾರ್ಗದ ಬದಲು ಅವರ್ತಿ ಮಾರ್ಗವಾಗಿ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಿಲ್ದಾಣ ಮಾಡಿದರೆ, ಭವಿಷ್ಯದ ಕೂಡಿಗೆಯ ಏರ್ ಸ್ಟ್ರಿಪ್, ಮತ್ತು ರಾಜ್ಯ ಹೆದ್ದಾರಿ 91ಕ್ಕೆ ಸಮೀಪವಾಗುವುದಿದ್ದು, ಸಾಲಿಗ್ರಾಮಕ್ಕೆ ಅಥವಾ ಕೊಣನೂರು, ಅರಕಲಗೂಡು, ಹೊಳೆನರಸಿಪುರ ಮಾರ್ಗದ ಯೋಜನೆ ಪೂರಕವಾಗಿ, ಸರ್ಕಾರದ ಬೊಕ್ಕಸಕ್ಕೆ ಲಾಭವಾಗುತ್ತದೆ. ಮೇಲಾಗಿ ಮೈಸೂರು ಜಿಲ್ಲಾ ಪಿರಿಯಾಪಟ್ಟಣ ತಾಲ್ಲೋಕಿನ ಹಾರಳ್ಳಿ ಹೋಬಳಿಯ ಮುತ್ತಿನಮುಳ್ಳುಸೋಗೆ ಗ್ರಾಮ ಮತ್ತು ಕುಶಾಲನಗರದ ಮಧ್ಯೆ ಸಂಪರ್ಕ ಕಲ್ಪಿಸುವ ಸಲುವಾಗಿ ಸುಮಾರು 12 ಕೋಟಿ ರೂಪಾಯಿಗಳ ಸೇತುವೆಯ ಕಾಮಗಾರಿ ಯೋಜನೆಯು ಇದ್ದಿರುತ್ತದೆ. ಇದರಿಂದ ಕುಶಾಲನಗರದಲ್ಲಿ ಇರುವ ಕೈಗಾರಿಕಾ ಬಡಾವಣೆಯಿಂದ 1,47,000 ಟನ್ ಕಾಫಿ ಉತ್ಪಾದನೆಯ ಸಾಗಾಟಕ್ಕೆ ಹೆಚ್ಚಿನ ಅನೂಕೂಲವಾಗುವುದಿರುತ್ತದೆ. ಈ ರೈಲ್ವೆ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವಂತೆ ಮಾಡಬೇಕೆಂದು ಮತ್ತು ಹಾಲಿಯಾಗಿ ನಿಗದಿ ಮಾಡಿರುವ ರೈಲ್ವೆ ನಿಲ್ದಾಣವನ್ನು ಗಿರಗೂರಿನಿಂದ ಮುತ್ತಿನ ಮುಳ್ಳುಸೋಗೆಗೆ ಸ್ಥಳಾಂತರಿಸಿ ನಿಸರ್ಗಧಾಮವನ್ನು ಸಂರಕ್ಷಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!