ಕುಶಾಲನಗರ, ಆ 11: ಕುಶಾಲನಗರದಲ್ಲಿ ದಶಕಗಳಿಂದ ಲೋಕಾರ್ಪಣೆ ಯಾಗದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಯುಜಿಡಿ ಕಾಮಗಾರಿ ಪ್ರಾಯೋಗಿಕ ಆರಂಭದಲ್ಲೇ ಲೋಪಗಳು ಕಂಡುಬರತೊಡಗಿವೆ. ಅನುಕೂಲ ಒದಗಿಸಲು ಅನುಷ್ಠಾನಗೊಂಡ ಒಳಚರಂಡಿ ಕಾಮಗಾರಿ ಇದೀಗ ಪ್ರಾಯೋಗಿಕವಾಗಿ ಚಾಲನೆಗೊಂಡ ಬೆನ್ನಲ್ಲೇ ನಿವಾಸಿಗಳಿಗೆ ಅನಾನುಕೂಲ ಸೃಷ್ಠಿಸಿದೆ.
ಅಲಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯಲು ಆರಂಭಿಸಿ ತಿಂಗಳು ಕಳೆದಿವೆ. ಕೆಲವೆಡೆ ಮನೆಗಳ ಟಾಯ್ಲೆಟ್ ಗಲೀಜು ರಸ್ತೆಯಲ್ಲಿ ಸರಾಗವಾಗಿ ಹರಿಯಲು ಆರಂಭಿಸಿವೆ.
ಗುಮ್ಮನಕೊಲ್ಲಿ ಸರಕಾರಿ ಶಾಲಾ ಹಿಂಭಾಗದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಮ್ಯಾನ್ ಹೋಲ್ ನಿಂದ ಟಾಯ್ಲೆಟ್ ವ್ಯಾಜ್ಯ ಉಕ್ಕಿ ರಸ್ತೆ ಮೇಲೆ ಹರಿಯುತ್ತಿದ್ದು ಇಲ್ಲಿನ ನಿವಾಸಿಗಳಿಗೆ ತೀವ್ರ ಸಮಸ್ಯೆ ಉಂಟುಮಾಡಿದೆ. ದುರ್ವಾಸನೆ ಬೀರುವ ತ್ಯಾಜ್ಯ ನೀರಿನಲ್ಲೇ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಡಳಿಯವರು ಸೂಕ್ತ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!