ಕಾರ್ಯಕ್ರಮ

ವೀರಭದ್ರ ವರ್ದಂತಿ ಮಹೋತ್ಸವಕೆ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿಗೆ ಆಹ್ವಾನ

ಸೋಮವಾರಪೇಟೆ, ಆ 10:- ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ವೀರಭದ್ರ ವರ್ದಂತಿ ಮಹೋತ್ಸವಕೆ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿ ಯವರನ್ನು ಆಹ್ವಾನಿಸಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆಶ್ರಮದಲ್ಲಿ ರವಿಶಂಕರ್ ಗುರೂಜಿ ಯವರನ್ನು ಭೇಟಿ ಮಾಡಿದ ರಾಜ್ಯದ ವಿವಿಧ ಭಾಗಗಳ ಮಠಾಧೀಶರ ತಂಡ ಕಳೆದ 6 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಈ ರಾಷ್ಟ್ರದ ಸಂಸ್ಕೃತಿ ರಕ್ಷಕ,ಆಂಜನೇಯ ಸ್ವಾಮಿಗೆ ಲಿಂಗದೀಕ್ಷೆ ನೀಡಿದ ವೀರಭದ್ರ ದೇವರ ಜಯಂತಿ ಆಚರಿಸಿಕೊಂಡು ಬರುತಿದೆ ಹಾಗು ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಈ ಭಾರಿ
ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂದಿರದಲ್ಲಿ ನಡೆಯಲಿರುವ ವೀರಭದ್ರೇಶ್ವರ ವರ್ಧಂತಿ ಮಹೋತ್ಸವ
ಆಚರಿಸಲು ನಿರ್ಧರಿಸಲಾಗಿದೆ ಆದ್ದರಿಂದ ತಾವುಗಳು ಸಾನಿಧ್ಯ ವಹಿಸುವುದರೊಂದಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕೆಂದು ಕೋರಿದರು.
ಇದಕ್ಕೆ ಪ್ರತಿಕ್ರಿಯೆ ರವಿಶಂಕರ್ ಗುರೂಜಿ ನಮ್ಮ ಪುರಾಣ ಇತಿಹಾಸದಲ್ಲಿ ವೀರಭದ್ರ ಸ್ವಾಮಿಗೆ ವಿಶೇಷ ಧಾರ್ಮಿಕ ಹಿನ್ನಲೆ ಇದೆ. ಬಹುತೇಕ ದೇವಾಲಯಗಳಲ್ಲಿ ವೀರಭದ್ರನ ಮೂರ್ತಿ ಇದೆ ಎಂದ ಅವರು ಅಂತ ಸ್ವಾಮಿಯ ವರ್ಧಂತಿ ಮಹೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್ ಮಹೇಶ್,ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಕೊಡಗು ಕಿರಿಕೂಡ್ಲಿ ಮಠದ ಸದಾಶಿವ ಸ್ವಾಮೀಜಿ,ರಾಜ್ಯಾಧ್ಯಕ್ಷರಾದ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ,ಉಪಾಧ್ಯಕ್ಷರಾದ ತಪೂಕ್ಷೇತ್ರ ಮನೆ ಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಕೊಡಗು ಹಾಸನ ಮಠಧೀಶರ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ,ದೇವನೂರು ಮಠದ ಮೃತ್ಯುಂಜಯ ಸ್ವಾಮೀಜಿ,ಬೆಂಗಳೂರಿನ ನಿಜಗುಣ ಸ್ವಾಮೀಜಿ, ನಂದೀಪುರ ಮಠದ ಮಹೇಶ್ವರ ಸ್ವಾಮೀಜಿ,ಹಾವೇರಿಯ ಚಂದ್ರಶೇಖರ ಸ್ವಾಮೀಜಿ,ಬೀದರ್ನ ಚನ್ನಮಲ್ಲ ಸ್ವಾಮೀಜಿ,ಉಗಾರಂಗೋಲದ ಮಹಾಂತ ಸ್ವಾಮೀಜಿ,ಪ್ರಮುಖರಾದ ಗೌರವ್,ರಮೇಶ್,ವಿದ್ಯಾಪ್ರಸನ್ನ,ಅಭಿಷೇಕ್ ಕಂಕಣವಾಡಿ ಹಾಗು ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!