ಕುಶಾಲನಗರ, ಜು 31: ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ತಗ್ಗು ಪ್ರದೇಶದ ಕಾರು ಚಾಲಕರು ಮಾಲೀಕರ ಬಡಾವಣೆ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿತ್ತು.
ಬಡಾವಣೆಗೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು ಬಡಾವಣೆ ನಿವಾಸಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭ ಒಡೆದ ಕೆರೆ ಏರಿಯನ್ನು ಸಧ್ಯದಕ್ಕೆ ಮುಚ್ಚುವುದು ಬೇಡ. ಏರಿ ಮುಚ್ಚಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಮತ್ತೆ ಏರಿ ಓಡೆದರೆ ನೀರು ಒಮ್ಮೆಲೆ ಮುನ್ನುಗ್ಗಲಿದೆ. ಇದರಿಂದಾಗಿ ಯಥಾಸ್ಥಿತಿಯಲ್ಲೇ ಕೆರೆ ಇರಲಿ ಎಂಬ ಬೇಡಿಕೆಗೆ ಶಾಸಕರು ಸಮ್ಮತಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದ ನಂತರ ಬಡಾವಣೆ ಜಲಾವೃತವಾಗದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯ ಕಿರಣ್, ಮಾಜಿ ಅಧ್ಯಕ್ಷ ಮಂಜುನಾಥ್, ಪುರಸಭಾ ಸದಸ್ಯ ದಿನೇಶ್, ಶಿವಶಂಕರ್, ಪ್ರಕಾಶ್, ಪ್ರಮುಖರಾದ ಶಿವಕುಮಾರ್, ರಂಜನ್, ರೋಷನ್ ಮತ್ತಿತರರು ಇದ್ದರು.
Back to top button
error: Content is protected !!