ಕುಶಾಲನಗರ, ಜು 23: 23 ಚುನಾಯಿತ ಜನಪ್ರತಿನಿಧಿಗಳು ಇದ್ದು 8-10 ಸಾವಿರ ಜನಸಂಖ್ಯೆ ಇರುವ ನೂರಾರು ವರ್ಷಗಳ ಇತಿಹಾಸ ಇರುವ ಆಡಳಿತ ಮಂಡಳಿ ಇರುವ ಮುಳ್ಳುಸೋಗೆ ಗ್ರಾಮಪಂಚಾಯಿತಿಯನ್ನು ಕೆಲವರ ಪಿತೂರಿ,ಒತ್ತಾಯಕ್ಕೆ ಮಣಿದು ಕುಶಾಲನಗರ ಪಟ್ಟಣ ಪಂಚಾಯಿತಿಯೊಂದಿಗೆ ವಿಲಿನಗೊಳಿಸಿ ಮುಳ್ಳು ಸೋಗೆ ಗ್ರಾಮದ ಅಭಿವೃದ್ಧಿಗೆ ಕಂಟಕವಾಗಿದಲ್ಲದೆ, ಮೂಲಭೂತ ಸೌಕರ್ಯಗಳು ನೆನೆಗುದಿಗೆ ಬಿದ್ದಿದ್ದು ಅಭಿವೃದ್ಧಿ ಮಾರಿಚಿಕೆ ಆಗಿದ್ದು ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಅಸಡ್ಡೆ ತೋರುತಿದ್ದು ಇವರ ನಿಲುವು ಸರಿಯಲ್ಲಾ.
10ಸಾವಿರ ಜನ ಸಂಖ್ಯೆಯ ವಿಶಾಲ ಭೂಪ್ರದೇಶಕ್ಕೆ ಆಡಳಿತ ಪಕ್ಷದ ಶಾಸಕರ ಮರಮಾಪ್ತ ಇಬ್ಬರನ್ನು ನಾಮನಿರ್ದೇಶನ ಮಾಡುವ ಮೂಲಕ ರಾಜಕೀಯ ಮಾಡಿರುವುದಲ್ಲದೆ ಇಂತಹ ರಾಜಕೀಯ ಪ್ರೇರಿತ ನಿಲುವಿನಿಂದ ಗ್ರಾಮದ ಸಮಸ್ಯೆ ಮತ್ತಷ್ಟು ದುಪ್ಪಟ್ಟವಾಗಲಿದೆ. ಗ್ರಾಮದ ಅಭಿವೃದ್ಧಿಗೋಸ್ಕರ ಪಕ್ಷಾತೀತವಾಗಿ ಒಮ್ಮತದಿಂದ ಅಧಿಕಾರ ತ್ಯಜಿಸಿದ 23 ಗ್ರಾಮ ಪಂಚಾಯಿತಿ ಸದಸ್ಯರುಗಳಲ್ಲಿ ಎರಡು ಜನ ಮಾತ್ರ ನಾಮನಿರ್ದೇಶನ ಮಾಡಿ ಉಳಿದವರನ್ನು ಕೈ ಬಿಟ್ಟಿರುವುದು ಉಳಿದ 21 ಸದಸ್ಯರಿಗೆ ಮಾಡಿರುವ ಅವಮಾನವಲ್ಲದೆ ಅವರು ಪ್ರತಿನಿಧಿಸಿದ ವಾರ್ಡಿಗೆ ಎಸಗಿದ್ದ ಅಪಮಾನವಾಗಿದ್ದು ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಚುನಾವಣೆ ಆಗುವವರೆಗು ಉಳಿದ 21 ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು ಇಲ್ಲ ಕೂಡಲೆ ಪುರಸಭೆಗೆ ಚುನಾವಣೆ ಮಾಡಲು ಮುಂದಾಗಬೇಕು
ತಪ್ಪಿದಲ್ಲಿ ಕುಶಾಲನಗರ ಬಿಜೆಪಿ ಯುವ ಮೋರ್ಚಾದ ವತಿಯಿಂದ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು
Back to top button
error: Content is protected !!