ಪಿರಿಯಾಪಟ್ಟಣ, ಜು 04: ಅಶೋಕ ಲೈಲ್ಯಾಂಡ್ ಕಂಪನಿಯ ಲಘು ವಾಹನಗಳು ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಣೆ ಮಾಡಲು ಮತ್ತು ರೈತರು ಹಾಗೂ ಮದ್ಯಮ ವರ್ಗದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಗಲಿವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ನೂತನವಾಗಿ ಅಶೋಕ್ ಲೈಲ್ಯಾಂಡ್ ಸೇಲ್ಸ್ ಅಂಡ್ ಸರ್ವಿಸಸ್ ಶೋ ರೂಂ ಉದ್ಘಾಟಿಸಿ ಮಾತನಾಡಿದರು.
ಹಿಂದೂಜಾ ಗ್ರೂಪ್ ಭಾರತೀಯ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಅಶೋಕ್ ಲೇಲ್ಯಾಂಡ್ ಲಘು ಮತ್ತು ಬಾರಿ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪ್ರಮುಖವಾಗಿದ್ದು, ಇದು ರೈತರ ಹಾಗೂ ಮದ್ಯಮ ವರ್ಗದ ಜನರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಜಮೀನಿನಿಂದ ಮಾರುಕಟ್ಟೆಗೆ ಸಾಗಣೆ ಮಾಡಲು ಬೇರೆಯವರನ್ನು ಅವಲಂಬಿಸುವ ಬದಲಾಗಿ ತಾವೇ ಲಘು ಪ್ರಮಾಣದ ವಾಹನವನ್ನು ಖರೀದಿ ಮಾಡುವ ಮೂಲಕ ಸಾಗಣೆ ವೆಚ್ಚ ಮತ್ತು ತಮ್ಮ ಬೆಳೆಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು ಹಾಗೆಯೇ ಮದ್ಯಮ ವರ್ಗದ ಜನರು ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಈ ವಾಹನಗಳು ಸಹಕಾರಿಯಾಗಿದೆ ಎಂದರು.
ಅಶೋಕ್ ಲೇಲ್ಯಾಂಡ್ ಕಂಪನಿ ಪ್ರಾಂತೀಯ ವ್ಯವಸ್ಥಾಪಕ ಪ್ರೀತಂ ಕೃಷ್ಣಮೂರ್ತಿ ಮಾತನಾಡಿ ದೇಶದ ಅಭಿವೃದ್ಧಿಗೆ ನಮ್ಮ ಕಂಪನಿಯು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅನೇಕ ರೀತಿಯ ಬಾರಿ ಮತ್ತು ಲಘು ವಾಹನಗಳ ತಯಾರಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಸ್, ಟ್ರ್ಯಾಕ್ಟರ್, ಎಲೆಕ್ಟ್ರಿಕ್ ಟ್ರಕ್, ಲಾರಿ, ಹಾಗೂ ಸರಕುಗಳನ್ನು ಸಾಗಣೆ ಮಾಡಲು ಗೂಡ್ಸ್ ವಾಹನಗಳನ್ನು ತಯಾರಿಸುವ ಮೂಲಕ ಸೇರಿದಂತೆ ರೈತರು ಹಾಗೂ ಸಾಮಾನ್ಯ ವರ್ಗದ ಜನರ ಬದುಕಾಗಿ ಮಾರ್ಪಟ್ಟಿದೆ.
ಅಶೋಕ್ ಲೈಲ್ಯಾಂಡ್ ಕಂಪನಿಯ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಾಣಿಜ್ಯ ವಾಹನ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಕಂಪನಿ ಮಾಲೀಕ ಸುಬ್ರಹ್ಮಣ್ಯ ಮಾತನಾಡಿ ಅಶೋಕ್ ಲೇಲ್ಯಾಂಡ್ ವಾಹನಗಳು ಬಹಳ ವರ್ಷಗಳಿಂದಲೂ ತಮ್ಮ ಭರವಸೆ ಹಾಗೂ ದೃಡತೆಯನ್ನು ಕಾಪಾಡಿಕೊಂಡು ಬಂದಿವೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿರಿಯಾಪಟ್ಟಣದಲ್ಲಿ ಇದರ ಶಾಖೆಯನ್ನು ತೆರೆಯಲಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಅಶೋಕ್ ಲೈಲ್ಯಾಂಡ್ ಶೋ ರೂಂ ಮಾಲೀಕ ವಿಟ್ಲ ಹರೀಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಎಂ.ಎಂ.ರಾಜೇಗೌಡ, ತೆಲುಗಿನ ಕುಪ್ಪೆ ನಾಗಣ್ಣ ಸೇರಿದಂತೆ ಕಂಪನಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Back to top button
error: Content is protected !!