ಕುಶಾಲನಗರ, ಜೂ 29: ನಂಜರಾಯಪಟ್ಟಣ ಗ್ರಾಮದ ದಾಸವಾಳ ಕಾವೇರಿ ನದಿ ತಟದಲ್ಲಿ ವಾಸವಿರುವ ನಂದನ್, ಲಲಿತ, ಕುಮಾರನ್ ಅವರ ಮನೆಗೆ ಹೋಗುವ ಸಾರ್ವಜನಿಕ ರಸ್ತೆಗೆ ಕಾಡಾನೆ ಹಾವಳಿ ತಡೆಗಟ್ಟಲು ರಸ್ತೆಗೆ ಅಡ್ಡಲಾಗಿ ರೈಲ್ವೆ ಗೇಟ್ ನಿರ್ಮಾಣ ಮಾಡಲಾಗಿತ್ತು .ಈ ಭಾಗದ ಹಲವು ಮನೆಗಳಿಗೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗಲು ತೊಂದರೆ ಉಂಟಾಗುತ್ತಿದ್ದು ಇದರ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ ಮೇರೆಗೆ ಅಧಿಕಾರಿಗಳು ಆನೆ ರೈಲ್ವೆ ಗೇಟ್ ಗೆ ಸ್ಲೈಡಿಂಗ್ ಮಾದರಿ ಡೋರ್ ನಿರ್ಮಿಸಿದ್ದರು. ಇದರಿಂದ ಹಲವು ಕುಟುಂಬಗಳಿಗೆ ಸಹಾಯವದರೂ ಕೂಡ ಇತ್ತಿಚೆಗೆ ಕಾಡಾನೆ ಸ್ಲೈಡಿಂಗ್ ಡೋರ್ ಹಾನಿ ಮಾಡಿ ಗೇಟ್ ಮುರಿದು ಹಾಕಿದೆ. ಇದರ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಕೂಡ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಸದರಿ ಜಾಗಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್ ವಿಶ್ವ ಬೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯ ನಿವಾಸಿಗಳಾದ ಯಶೋಧ ಇದ್ದರು.
Back to top button
error: Content is protected !!