ಕುಶಾಲನಗರ, ಜೂ 23:ದಿನಾಂಕ: 23-06-2024 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣವಾದ ಕೋಟೆ ಬೆಟ್ಟಕ್ಕೆ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಮೂಲದ ಪ್ರವಾಸಿಗಾರು ಕಾರಿನಲ್ಲಿ ತೆರಳುವ ಸಂದರ್ಭ ಮಾರ್ಗ ಮಧ್ಯದಲ್ಲಿ ಸಮಯ ಸುಮಾರು ಬೆಳಗ್ಗೆ 10.25 ಗಂಟೆಗೆ ಇಬ್ಬರೂ ಅಪರಿಚಿತ ವ್ಯಕ್ತಿಗಳು ಅದೇ ಮಾರ್ಗದಲ್ಲಿ ಬೈಕಿನಲ್ಲಿ ಹಿಂದೆಯಿಂದ ಬರುತ್ತಿದ್ದು, ಕಾರಿನವರು ರಸ್ತೆ ಬಿಡಲಿಲ್ಲವೆಂಬ ವಿಚಾರವಾಗಿ ಮಾತಿಗೆ ಮಾತು ಬೆಳೆದು ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಕೈ ಮತ್ತು ಹೆಲೈಟ್ ನಿಂದ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದು, ಈ ಸಂಧರ್ಭದಲ್ಲಿ ಬಿಡಿಸಲು ಹೋದ ಕಾರಿನಲ್ಲಿದ್ದ ಯುವತಿಯರ ಜೊತೆ ವಾಗ್ವದ ಮಾಡಿರುವುದಾಗಿದೆ. ಈ ಗಲಾಟೆಯಲ್ಲಿ ಒಬ್ಬಳು ಯುವತಿಯು ಧರಿಸಿದ್ದ ಚಿನ್ನದ ಸರ ಆಕೆಗೆ ತಿಳಿಯದಂತೆ ಬಿದ್ದು ಹೋಗಿರುವುದಾಗಿ ಮತ್ತು ನಂತರ ಹುಡುಕಾಡಲಾಗಿ ಸಿಕ್ಕಿರುವುದಿಲ್ಲವೆಂದು ದೂರು ನೀಡಿದ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ ಹಾಗೂ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರಿಂದ ಚಿನ್ನದ ಸರ ಕಿತ್ತುಕೊಳ್ಳುವ ಉದ್ದೇಶದಿಂದ ಗಲಾಟೆ ನಡೆಸಿರುವುದಾಗಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವುದು ಕಂಡುಬಂದಿರುತ್ತದೆ. ಈ ರೀತಿಯ ಯಾವುದೇ ಘಟನೆಗಳು ನಡೆದಿರುವುದಿಲ್ಲ & ಸಾರ್ವಜನಿಕರು ಯಾವುದೇ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.
ಪ್ರವಾಸಿಗರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಈಗಾಗಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
Back to top button
error: Content is protected !!