ಕುಶಾಲನಗರ, ಜು 14: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಸ್ವೀಕಾರ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಎಂ.ಬಿ ಮೊಣ್ಣಪ್ಪನವರು ವಹಿಸಿದ್ದರು. ಕೊಡಗಿನ ಸಾಹಿತಿಗಳು ಹಾಗೂ ಶಾಲೆಯ ನಿರ್ದೇಶಕರಾದ ಬಿ.ಪಿ ಅಪ್ಪಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡುವ ಮೂಲಕ ಉತ್ತಮ ಫಲಿತಾಂಶ ಪಡೆದು ಶಾಲೆಗೆ ಮತ್ತು ಪೋಷಕರಿಗೆ ಒಳ್ಳೆಯ ಹೆಸರನ್ನು ತರುವಂತೆ ತಿಳಿಸಿದರು.
ಸದ್ಗುರು ಸಮಾಜದ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯವರು ಪೋಷಕ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!