ಕಾರ್ಯಕ್ರಮ
ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ
ಕುಶಾಲನಗರ, ಜೂ 12:
ಸೌಂದರ್ಯ ತಜ್ಞರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ತರಬೇತು ಕಾರ್ಯಗಾರ ನಡೆಸುವ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಲುಕ್ಸ್ ಅಕಾಡೆಮಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಕುಶಾಲನಗರದ ಸರಕಾರಿ ಆಸ್ಪತ್ರೆ ಸಮೀಪದಲ್ಲಿ ಸ್ಥಳೀಯ ಸೌಂದರ್ಯ ತಜ್ಞ ಲೋಕೇಶ್ ಅವರ ಮಾಲಿಕತ್ವದಲ್ಲಿ ನಿರ್ಮಾಣವಾಗಿರುವ ಲುಕ್ಸ್ ಅಕಾಡೆಮಿ ಸಂಸ್ಥೆಯನ್ನು ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ವೇದಿಕೆಯ ಗೌರವಾಧ್ಯಕ್ಷರಾದ ವನಿತಾ ಚಂದ್ರಮೋಹನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸೌಂದರ್ಯ ತಜ್ಞರು ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ತರಬೇತು ಹೊಂದುವುದರೊಂದಿಗೆ ಗುಣಮಟ್ಟದ ಸೌಂದರ್ಯವರ್ಧಕಗಳ ಬಗ್ಗೆ ಅರಿವು ಮಾಹಿತಿ ಪಡೆಯುವುದು ಅಗತ್ಯವಾಗಿದೆ ಎಂದರು.
ಖ್ಯಾತ ಸೌಂದರ್ಯ ವರ್ಧಕ ಸಂಸ್ಥೆಗಳ ತಜ್ಞರುಗಳ ಮೂಲಕ ತರಬೇತಿಯನ್ನು ಪಡೆಯಲು ಈ ರೀತಿಯ ವೇದಿಕೆಯ ಅಗತ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸೌಂದರ್ಯ ವರ್ಧಕ ವೇದಿಕೆಯ ಜಿಲ್ಲಾಧ್ಯಕ್ಷರಾದ ರತ್ನ ಯತೀಶ್, ಪ್ರಧಾನ ಕಾರ್ಯದರ್ಶಿ ಪವಿತ್ರ ಲೋಕೇಶ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್ ಮಾತನಾಡಿ ನೂತನ ಸಂಸ್ಥೆಗೆ ಶುಭ ಕೋರಿದರು.
ಈ ಸಂದರ್ಭ ಮಾತನಾಡಿದ ಲುಕ್ಸ್ ಅಕಾಡೆಮಿ ಸಂಸ್ಥೆಯ ಮಾಲೀಕರಾದ ಲೋಕೇಶ್, ಸಂಸ್ಥೆಯ ಮೂಲಕ ಸೌಂದರ್ಯ ತಜ್ಞರಿಗೆ ತರಬೇತಿ ಹಾಗೂ ಖ್ಯಾತ ಸೌಂದರ್ಯವರ್ಧಕ ಸಂಸ್ಥೆಗಳ ತಜ್ಞರ ಮೂಲಕ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು.
ಯುವತಿಯರು, ಮಹಿಳೆಯರಿಗೆ ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತದೆ ಎಂದರು.
ಈ ಸಂದರ್ಭ ಮಧು ಲೋಕೇಶ್ ತಾಲೂಕು ಸೌಂದರ್ಯವರ್ಧಕ ವೇದಿಕೆಯ ಅಧ್ಯಕ್ಷರಾದ ನಾಗಮಣಿ ಮತ್ತು ವಿವಿಧ ಬ್ಯೂಟಿಶ್ಯನ್ ಕೇಂದ್ರಗಳ ಮಾಲೀಕರು ಇದ್ದರು.