ಸಾಮಾಜಿಕ

ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಮರು ಚಾಲ್ತಿಗೆ

ಕುಶಾಲನಗರ,ಜೂ ೧೨: ಸಮಾಜದಲ್ಲಿ ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಫಿಲೋಮಿನಾ ತಿಳಿಸಿದ್ದಾರೆ.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯು ಕಾರಣಾಂತರಗಳಿಂದ ಕೆಲವು ವರ್ಷಗಳು ಕಾರ್ಯಸ್ಥಗಿತವಾಗಿತ್ತು. ಇದೀಗ ಸಮಿತಿಯು ಹೊಸ ಹುಮ್ಮಸ್ಸಿನೊಂದಿಗೆ ಮತ್ತೇ ಕಾರ್ಯನಿರ್ವಹಿಸಲಿದೆ ಎಂದರು.
ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪಕ್ಷಾತೀತವಾಗಿ, ರಾಜಕೀಯರಹಿತವಾಗಿ, ಯಾವುದೇ ನಿರೀಕ್ಷೆಗಳು, ಅಪೇಕ್ಷೆಗಳಿಲ್ಲದೇ ಸಮಿತಿ ಕಾರ್ಯನಿರ್ವಹಿಸುದ್ದೇವೆ ಎಂದು ನೂತನ ಸಮಿತಿ ಪ್ರತಿಜ್ಞಾವಿಧಿ ಸ್ವೀಕರಿಸಿತು.
ಈ ಸಂದರ್ಭ ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ಎಂ.ಪಿ.ಜಯಲಕ್ಷ್ಮಿ, ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಬಿ.ಪಾರ್ವತಿ, ಗೌರವಾಧ್ಯಕ್ಷರಾದ ಪದ್ಮಾವತಿ ಪರಮೇಶ್, ಗೌರವ ಸಲಹೆಗಾರರಾದ ವನಿತಾ ಚಂದ್ರಮೋಹನ್, ಸಂಘಟನಾ ಕಾರ್ಯದರ್ಶಿ ಜಯಾ ಪ್ರಕಾಶ್, ನಿರ್ದೇಶಕರಾದ ಜಯಶ್ರೀ ವಸಂತ್, ಭಾಗ್ಯ, ಜ಼ರೀನಾ, ಲಲಿತಾ ತಿಮ್ಮಯ್ಯ, ಸಾವಿತ್ರಿ ರಾಜನ್ ಹಾಗೂ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!