ಕುಶಾಲನಗರ, ಜೂ 06: ಭೂ ಮರುಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ” ಎಂಬ ವಿಶ್ವ ಪರಿಸರ ದಿನದ ಥೀಮ್ ನ ಅನ್ವಯದೊಂದಿಗೆ ಇಂದು ಕಾಲೇಜಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ ಸಸಿ ನೆಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅಧ್ಯಾಪಕಿಯರಾದ ರಾಜೇಶ್ವರಿ ಮತ್ತು ಸುಷ್ಮಾರವರು ಇಂದಿನ ಆಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಾಜಿ ಆಲುಂಗಲ್ ರವರು ವಿದ್ಯಾರ್ಥಿಗಳಿಗೆ ಪರಿಸರದ ಅಳಿವು ಉಳಿವಿನ ಅರಿವು ಮೂಡಿಸಿದರು. ವಿದ್ಯಾರ್ಥಿಳೆಲ್ಲರೂ ಸಸಿಗಳನ್ನು ಉಡುಗೊರೆಗಳಂತೆ ಬದಲಾಯಿಸಿಕೊಂಡರು. ಪೋಸ್ಟರ್ ಮೇಕಿಂಗ್ ಎಂಬ ಸ್ಪರ್ಧೆಯನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಹಾಗೂ ಪರಿಸರದ ಉಳಿವಿನ ಪ್ರಾಮುಖ್ಯತೆಯನ್ನು ಅರಿಯುವಂತೆ ಅವಕಾಶ ಕಲ್ಪಿಸಲಾಗಿತ್ತು.
Back to top button
error: Content is protected !!