ಅವ್ಯವಸ್ಥೆ

ಕುಶಾಲನಗರದ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಪರಿಶೀಲನೆ

ಅಗತ್ಯ ದಾಖಲಾತಿಗಳ ನಿರ್ವಹಣೆ‌ ಕೊರತೆ ಹಿನ್ನಲೆ ಕ್ರಮ

ಕುಶಾಲನಗರ, ಜೂ 01: ರಾಜ್ಯದಲ್ಲಿ ಇತ್ತೀಚೆಗೆ ಘಟಿಸಿದ ಭ್ರೂಣ ಹತ್ಯೆ ಪ್ರಕರಣ ಹಿನ್ನಲೆ ಆರೋಗ್ಯ ಇಲಾಖೆ ಎಲ್ಲೆಡೆ ಕಟ್ಟುನಿಟ್ಟಿನ ಎಚ್ಚರ ವಹಿಸುತ್ತಿದೆ. ಇದರ ಅಂಗವಾಗಿ ಎಲ್ಲೆಡೆ ಪರಿಶೀಲನೆ‌ ಹಮ್ಮಿಕೊಳ್ಳಲಾಗುತ್ತಿದೆ.

ಅದರಂತೆ ದಿನಾಂಕ 21/05/2024 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಡಾ| ವಿವೇಕ್ ದೊರೈ ಮತ್ತು ತಂಡ ಜಿಲ್ಲಾ ಮಟ್ಟದ ತಪಾಸಣೆ ಮತ್ತು ಮೇಲ್ವಿಚಾರಣೆ ತಂಡದ ವರದಿ ಅನ್ವಯ, ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ 1994 ಹಾಗೂ ನಿಯಮ 1996ರ ಉಲ್ಲಂಘನೆಯಾಗಿದ್ದು ಹಾಗೂ ಲಿಂಗ ಪತ್ತೆ ಮಾಡುತ್ತಿರುವವರ ಬಗ್ಗೆ ನಿಗಾವಹಿಸಿದ್ದು, ರಾಜ್ಯ ತಂಡ ಹಾಗೂ ಜಿಲ್ಲಾ ತಂಡಗಳು ಭೇಟಿ ನೀಡಿ ಪರಿಶೀಲಿಸಿದಾಗ ಕಾಯ್ದೆ ಉಲ್ಲಂಘನೆಯಾಗಿರುವುದು ಖಾತರಿ ಪಡಿಸಿಕೊಂಡು ಕುಶಾಲನಗರದ ಗಣೇಶ್ ಸ್ಕ್ಯಾನಿಂಗ್ ಸೆಂಟರ್ ನ ದಾಖಲಾತಿಗಳನ್ನು ವಶ ಪಡಿಸಿಕೊಂಡು ಹಾಗೂ ಕೇಂದ್ರವನ್ನು ಮುಟ್ಟುಗೋಲು ಮಾಡಿ ಸದರಿ ಕೇಂದ್ರದ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ತಂಡ ನಿರ್ದೇಶಿಸಿದೆ.

ದಿನಾಂಕ 21/05/2024 ರಂದು ಕುಶಾಲನಗರ ಪಟ್ಟಣದಲ್ಲಿರುವ ಸ್ಕ್ಯಾನಿಂಗ್ ಕೇಂದ್ರಗಳಾದ ಲಕ್ಷ್ಮೀ ರಾಮನ್ ಬಾಲಾಜಿ ಆಸ್ಪತ್ರೆ, ಸಾಗರ್ ಆಸ್ಪತ್ರೆ, ಮೆಡಿಪ್ಲೆಕ್ಸ್ ಡಯಾಗೋಸ್ಟಿಕ್ ಸೆಂಟರ್ ಗಳಿಗೆ‌ ಕೂಡ ಭೇಟಿ ಪರಿಶೀಲಿಸಲಾಗಿದೆ. ಎಂದು‌ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!