ಪ್ರಕಟಣೆ

ಹಾರಂಗಿ ಅಣೆಕಟ್ಟೆಗೆ 24*7 ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಭಾಸ್ಕರ್ ನಾಯಕ್ ಒತ್ತಾಯ

ಕುಶಾಲನಗರ, ಮೇ 21: ಹಾರಂಗಿ ಅಣೆಕಟ್ಟೆಗೆ 24*7 ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಒತ್ತಾಯಿಸಿದರು.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ರಾಜ್ಯಕ್ಕೆ ನೀರುಣಿಸುವ ಅಣೆಕಟ್ಟೆಯಲ್ಲಿ ಪ್ರಮುಖ ಅಣೆಕಟ್ಟೆ ಯಾದ ಹಾರಂಗಿ ಅಣೆಕಟ್ಟೆ ಕೂಡ ಒಂದು. ಆದರೆ ಈ ಅಣೆಕಟ್ಟೆಗೆ ಸರಿಯಾದ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ ಎಂದು ಆರೋಪಿಸಿದರು. ಕುಶಾಲನಗರದಿಂದ ಕೂಡಿಗೆ ಭುವನಗಿರಿ ಮಾರ್ಗವಾಗಿ ಸುಮಾರು 60km ನಷ್ಟು ಬಳಸಿಕೊಂಡು ಬಂದು ಕೊನೆಯದಾಗಿ ಹಾರಂಗಿ ಅಣೆಕಟ್ಟೆಗೆ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಈ ಮಾರ್ಗ ಮಧ್ಯ ಯಾವುದಾದರೂ ಮರ ವಿದ್ಯುತ್ ತಂತಿ ಮೇಲೆ ಬಿದ್ದರೆ ಹಾರಂಗಿಗೆ ವಿದ್ಯುತ್ ಕಡಿತವಾಗುತ್ತದೆ. ಸಣ್ಣ ಗಾಳಿ ಮಳೆ ಬಂದರೂ ಸಹ ಹಾರಂಗಿ ಅಣೆಕಟ್ಟೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ವಿದ್ಯುತ್ ಕಡಿತವಾದ ಕೂಡಲೇ ಅಣೆಕಟ್ಟೆಯ ಮುಂಭಾಗದಲ್ಲಿರುವ BSNL ಟವರ್ ನಲ್ಲಿ ಯಾವುದೇ ನೆಟ್ವರ್ಕ್ ಇಲ್ಲದಂತಾಗುತ್ತದೆ. ಅಣೆಕಟ್ಟೆಯಲ್ಲಿ ಮತ್ತು ಮುಂಭಾಗದ ಗ್ರಾಮಗಳಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಕರೆ ಮಾಡಲು ನೆಟ್ವರ್ಕ್ ಪ್ರಾಬ್ಲಮ್ ಕೂಡ ಎದುರಾಗುತ್ತಿದೆ ಮತ್ತು ಅಣೆಕಟ್ಟೆಗೆ ಸಂಗೀತ ಕಾರಂಜಿ ನೋಡಲು ಬರುವಂತ ಪ್ರವಾಸಿಗರು ಹಲವು ಬಾರಿ ಕಾರಂಜಿ ನೋಡದೆ ನಿರಾಸೆಯಿಂದ ತೆರಳಿದ ಘಟನೆ ಕೂಡ ಸಂಭವಿಸಿದೆ, ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜುಗು ಸಮಸ್ಯೆ ಉಂಟಾಗುತ್ತಿದೆ

ಅಣೆಕಟ್ಟೆ ತುಂಬಿದಂಥ ಸಂದರ್ಭ ಯಾವುದೇ ಸಮಯದಲ್ಲಿ ಯಾವುದೇ ಸಮಸ್ಯೆ ಕೂಡ ಉಂಟಾಗಬಹುದಾಗಿರುವುದರಿಂದ ಆದಷ್ಟು ಬೇಗ ಹಾರಂಗಿ ಅಣೆಕಟ್ಟೆಗೆ ಭದ್ರತಾ ದೃಷ್ಟಿಯಿಂದ ಪ್ರತ್ಯೇಕ ವಿದ್ಯುತ್ ಸರಬರಾಜುನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಭಾಸ್ಕರ್ ನಾಯಕ್ ರವರು ಒತ್ತಾಯ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!