ಸೋಮವಾರಪೇಟೆ, ಮೇ 02: :ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್ ಗಳ ಸೇವೆ ಗಮನಾವಾಗಿದ್ದು,ಜನಸಾಮಾನ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಮಡಿಕೇರಿ ರಸ್ತೆಗೆ ಸ್ಥಳಾಂತರ ಗೊಂಡಿರುವ ಚೌಡ್ಲು ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಾಂಗಣ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್ ಜನಸ್ನೇಹಿಯಾಗಿ ಜನಸಾಮಾನ್ಯರಿಗೆ ಹತ್ತಿರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.ವ್ಯಾಪಾರ,ಕೃಷಿ ಸೆರಿದಂತೆ ಹಲವು ಕ್ಷೇತ್ರಗಳಿಗೆ ಸೇವೆ ನೀಡುತ್ತಿದೆ ಆದರೂ ನಿಸ್ವಾರ್ಥವಾಗಿ ದುಡಿಯುತ್ತಿರುವ ರೈತರಿಗೆ ಮತ್ತಷ್ಟು ಸೇವೆಸಲ್ಲಿಸುವಂತಾಗಬೇಕು ಎಂದರು.
ಬ್ಯಾಂಕ್ ನ ಮೈಸೂರು ವಲಯದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಅರುಣ್ ಮಾತನಾಡಿ ಕರ್ಣಾಟ ಬ್ಯಾಂಕ ಸ್ಥಾಪನೆ ಗೊಂಡು ನೂರು ವರ್ಷ ಪೂರೈಸಿದೆ ಈಗ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಕೆಲವೆಡೆಯು ತನ್ನ ಶಾಖೆಯನ್ನು ಹೊದಿದ್ದೆ ಆದ್ದರಿಂದಲೇ ಭಾರತದ ಕರ್ನಾಟಕ ಬ್ಯಾಂಕ್ ಎಂದು ಹೆಸರುವಾಸಿಯಾಗಿದೆ ಎಂದರು. ಸೋಮವಾರಪೇಟೆ ಶಾಖೆಯು 1976 ರಲ್ಲಿ ಆರಂಭಗೊಂಡು 16000 ಗ್ರಾಹಕರಿಗೆ ತನ್ನ ಸೇವೆ ನೀಡುತ್ತಾ 143ಕೋಟಿ ವಹಿವಾಟು ನಡೆಸಿದಿದೆ ಎಂದರು.
ಬ್ಯಾಂಕನ ಕ್ಲಸ್ಟರ್ ಮುಖ್ಯಸ್ಥ ಜಯಾನಂದ ದೇವಾಡಿಗ,ಶಾಖಾ ವ್ಯವಸ್ಥಾಪಕ ನಾಗರಾಜ ದೇವಾಡಿಗ ಕಾರ್ಯಕ್ರಮದ ವೇದಿಕೆಯಲ್ಲಿ ಉಪ ಸ್ಟಿತರಿದ್ದರು.
ಬ್ಯಾಂಕ್ ನ ಸಿಬ್ಬಂದಿಗಳಾದ ಪ್ರಣೀತಾ ಉಪಾದ್ಯ ಪ್ರಾರ್ಥಿಸಿ, ತನುಶ್ರೀ ಕಾರ್ಯಕ್ರಮ ನಿರೂಪಿಸಿದರು.
Back to top button
error: Content is protected !!