ಆರೋಪ

ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಆತಂಕ: ಭಾಸ್ಕರ್ ನಾಯಕ್ ಆರೋಪ

ಕುಶಾಲನಗರ, ಮೇ 02:ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರು ಭಯ ಭೀರಾಗಿದ್ದಾರೆ ಎಂದು

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಆರೋಪಿಸಿದ್ದಾರೆ.

ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆಯುತ್ತಿದ್ದು ಹೆರಿಗೆ ಆಗುವಂತ ಸಂದರ್ಭದಲ್ಲಿ ನಾರ್ಮಲ್ ಡೆಲಿವರಿ ಆದರೆ ಸಮಸ್ಯೆ ಇರುವುದಿಲ್ಲ. ಆದರೆ ಸಿಸೇರಿಯನ್ ಮೂಲಕ ಹೆರಿಗೆಯಾಗುವವರಿಗೆ ಅರಿವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ ಮತ್ತು ಅರಿವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲಿ ಇಲ್ಲದೆ ಮೈಸೂರಿನಿಂದ ಬರುವ ಕಾರಣ ಈ ಸಮಸ್ಯೆಗಳು ಉಂಟಾಗುತ್ತಿದೆ. ವಾರದ ಹಿಂದೆಯಷ್ಟೇ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ಗರ್ಭಿಣಿಯೊಬ್ಬರಿಗೆ ತೀವ್ರ ರಕ್ತಸ್ರಾವ ವಾಗಿ ಅರಿವಳಿಕೆ ಔಷಧಿ ನೀಡುವ ತಜ್ಞ ವೈದ್ಯರು ಇಲ್ಲದೆ ಸುಮಾರು ಎರಡೂವರೆ ಗಂಟೆಗಳ ಕಾಲ ಕಾದು ನಂತರ ಖಾಸಗಿ ತಜ್ಞ ವೈದ್ಯರನ್ನು ಕರೆಸಿ ಅರಿವಳಿಕೆ ಔಷಧಿ ನೀಡಿ ಸಿಸೇರಿಯನ್ ಮೂಲಕ ಹೆರಿಗೆಯಾಗಿರುವ ಘಟನೆ ನಡೆದಿದೆ.

ಇದರಿಂದಾಗಿ ಗರ್ಭಿಣಿಯರು ಹೆರಿಗೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಹೋಗುವಂತ ಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಹೆರಿಗೆಗಾಗಿ ಬರುವಂತ ಗರ್ಭಿಣಿಯರಿಗಂತು ತುಂಬಾ ಆತಂಕ ಉಂಟಾಗಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಮತ್ತು ಕ್ಷೇತ್ರದ ಶಾಸಕರು ಕೂಡ ಇತ್ತ ಗಮನ ಹರಿಸಬೇಕು ಎಂದು ಭಾಸ್ಕರ್ ನಾಯಕ್ ರವರು ಒತ್ತಾಯ ಮಾಡಿದರು. ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸದೆ ಹೋದಲ್ಲಿ ಆಸ್ಪತ್ರೆಯೆದುರು ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ಕೂಡ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!