ಕುಶಾಲನಗರ, ಏ 14: ಡಾ.ಬಿ.ಆರ್.ಅಂಬೇಡ್ಕರ್ ಅವರ 136 ನೇ ರವರ ಜಯಂತಿ ಪ್ರಯುಕ್ತ ರಂಗಸಮುದ್ರ ಗ್ರಾಮದ ಸಿರಾಜಿ ಹಳ್ಳ ದಲ್ಲಿರುವ ಅಂಬೇಡ್ಕರ್ ಭವನ ದಲ್ಲಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಆರ್.ಕೆ. ಚಂದ್ರು, ಮಾವಜಿ ರಕ್ಷಿತ್ ಹಾಗೂ ಗ್ರಾಮದ ಹಿರಿಯರಾದ ಗೌರಮ್ಮ ರವರು ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವ ಚಿತ್ರ ಕ್ಕೆ ಪುಷ್ಪರ್ಚನೆ ಸಲ್ಲಿಸಿದರು.
136 ನೇ ವರ್ಷದ ಅಂಬೇಡ್ಕರ್ ಜಯಂತಿ ಯನ್ನು ಉದ್ದೇಶಿಸಿ ಮಾತನಾಡಿದ ಆರ್.ಕೆ. ಚಂದ್ರು ರವರು ಗ್ರಾಮದ ಯುವ ಪೀಳಿಗೆಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರು.
ಮಾವಜಿ ರಕ್ಷಿತ್ ರವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ರವರು ಕೇವಲ ಒಂದು ಜನಾಂಗಕೇ ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ಜನ ಜನಾಂಗಕ್ಕೆ ಕೆಲಸ ಮಾಡಿರುವ ಸಂವಿಧಾನ ಶಿಲ್ಪಿ ಎಂದು ಹಾಡಿ ಹೊಗಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಯುವಕರು ನೆರೆದಿದ್ದರೂ ಕಾರ್ಯಕ್ರಮ ಮುಗಿದ ನಂತರ ಸಿಹಿ ಯನ್ನು ಹಂಚಿ ಸಂಭ್ರಮಿಸಲಾಯಿತು.
Back to top button
error: Content is protected !!