ಟ್ರೆಂಡಿಂಗ್

ಜೆಸಿಐನ ಸೆವೆನ್ ಡೇಸ್ ಗೋಲ್ಡನ್ ಬೇಸಿಗೆ ಶಿಬಿರ ಸಮಾರೋಪ

ಕುಶಾಲನಗರ, ಏ 28: ಜೆ ಸಿ ಕುಶಾಲನಗರ ಕಾವೇರಿ ವತಿಯಿಂದ ನಡೆದ ಸೆವೆನ್ ಡೇಸ್ ಗೋಲ್ಡನ್ ವೀಕ್ ಸಿಬಿರದ ಸಮಾರೋಪ ಸಮಾರಂಭವು ಇಂದು ವಾಸವಿ ಮಹಲ್ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ಕಾವೇರಿ ಘಟಕದ ಅಧ್ಯಕ್ಷ ಜಗದೀಶ್ ಬಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ 14ರ ಉಪಾಧ್ಯಕ್ಷ ಕೆ.ಪ್ರವೀಣ್ ಮಾತನಾಡಿ, ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು, ಮಕ್ಕಳು ಸವಾಲುಗಳನ್ನು ಎದುರಿಸಿ ಸಾಧಿಸಲು ದೃಢಸಂಕಲ್ಪ ಅಗತ್ಯ ಎಂದು ಹೇಳಿದರು.

ಜೂನಿಯರ್ ಜೆಸಿಐ ಕೋ ಆರ್ಡಿನೇಟರ್ ಕೆ.ಡಿ.ಪ್ರಶಾಂತ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಉತ್ತಮ ಅವಕಾಶವನ್ನು ಕಲ್ಪಿಸಿಕೊಡುವುದು ಎಂದು ಹೇಳಿದರು.

ಕುಶಾಲನಗರ ಕಾವೇರಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಜೆಸಿಐ ರಜನಿಕಾಂತ್ ಎಂ. ಜೆ. ಮಾತನಾಡಿ, ನಮಗೆ ಜೀವನದ ಉದ್ದೇಶ ಅತಿ ಮುಖ್ಯ ನಮ್ಮ ಗುರಿಗಳು ಬದಲಾಗಬಹುದು ಆದರೆ ಜೀವನದ ಉದ್ದೇಶ ಒಂದೇ ಆಗಿರಬೇಕು ಅದು ಸಮಾಜಕ್ಕೆ ಒಳಿತು ಮತ್ತು ದಾರಿದೀಪವಾಗಿರಬೇಕು ಎಂದು ವಿವರಿಸಿದರು.

ಶಿಬಿರದ ತರಬೇತಿದಾರರಾದ ಜೆಸಿಐ ಕುಶಾಲನಗರ ಕಾವೇರಿ ಸಂಸ್ಥೆಯ ಕಾರ್ಯದರ್ಶಿ‌ ತೇಜ ದಿನೇಶ್ ಒಂದು ವಾರದಲ್ಲಿ ನಡೆದಂತಹ ಶ್ಲೋಕ ಯೋಗ, ಚರ್ಚಾ ಸ್ಪರ್ಧೆ ಹಾಗೂ ಇನ್ಸ್ಪಿರೇಷನಲ್ ಮೂವಿಗಳು ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಸಿದರು.

ಜೆಸಿಐ ಕುಶಾಲನಗರ ಘಟಕದ ಅಧ್ಯಕ್ಷ ಜಗದೀಶ್ ಬಿ.ಮಕ್ಕಳಿಗೆ ಜೀವನದಲ್ಲಿ ಉತ್ತಮ ಚಟುವಟಿಕೆಗಳು, ಕಲಿಕೆ, ಉತ್ತಮ ಹವ್ಯಾಸ ಜೀವನದಲ್ಲಿ ತುಂಬಾ ಅಗತ್ಯ ಅಂತ ಹೇಳಿದರು ಹಾಗೂ ಶಿಬಿರಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!