ಕುಶಾಲನಗರ, ಏ 18: ಕುಶಾಲನಗರದ ತಾಜ್ ಯೂತ್ ಕ್ಲಬ್ ವತಿಯಿಂದ ಮೇ 22 ರಿಂದ 26 ರವರೆಗೆ 5ನೇ ವರ್ಷದ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸಲೀಂ ತಿಳಿಸಿದರು.
ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,
ಕೊಡಗು ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಆಪು ಮತ್ತು ತೊಯೀಬ್ ನೇತೃತ್ವದಲ್ಲಿ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಟೂರ್ನಿ ನಡೆಯಲಿದ್ದು ವಿಜೇತರಿಗೆ ಪ್ರಥಮ ಬಹುಮಾನ 66,666, ದ್ವಿತೀಯ ಬಹುಮಾನ 33,333 ನಗದು ಸೇರಿದಂತೆ ಹಲವು ವೈಯುಕ್ತಿಕ ಬಹುನಾನಗಳನ್ನು ನೀಡಲಾಗುತ್ತದೆ.
ರೂ 3000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು ನೋಂದಣಿಗೆ 1500 ಮುಂಗಡ ಪಾವತಿಸಬೇಕಿದೆ.
ಮೇ 10 ತಂಡಗಳ ನೋಂದಣಿಗೆ ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಆಯಾ ಕೊಡಗಿನ ಜಮಾ ಅತ್ ವ್ಯಾಪ್ತಿಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ಗ್ರಾಮದಿಂದ ಕೇವಲ 4 ತಂಡಗಳ ಮಾತ್ರ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಅಜರ್: 9740514069, 8050478557, ಸಲ್ಮಾನ್: 9945060765, ಖಾಜಾ: 8217004775 ಸಂಪರ್ಕಿಸಲು ಕೋರಲಾಗಿದೆ.
ಅಸೋಸಿಯೇಷನ್ ಖಜಾಂಚಿ ಶಮೀಮ್, ಸದಸ್ಯ ರಿಜ್ವಾನ್, ತಾಜ್ ಯೂತ್ ಕ್ಲಬ್ ನ ಅಧ್ಯಕ್ಷ ಮುಜೀಬ್, ಕುಶಾಲನಗರ ಪುರಸಭಾ ಸದಸ್ಯ ವಿ.ಎಸ್.ಆನಂದಕುಮಾರ್, ತಾಜ್ ಯೂತ್ ಕ್ಲಬ್ ನ ಸಹ ಕಾರ್ಯದರ್ಶಿ ಆದಂ, ಸದಸ್ಯರಾದ ಸಲ್ಮಾನ್, ಖಾಜಾ ಮೊಯಿದ್ದಿನ್ ಇದ್ದರು.
Back to top button
error: Content is protected !!