ಕುಶಾಲನಗರ, ಏ 15: ರಾಜ್ಯ ಸರಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೆಟ್ಟಿಲುಗಳಾಗಲಿವೆ ಎಂದು ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ ಹೇಳಿದರು.
ಲೋಕಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ಯಾರೆಂಟಿ ಯೋಜನೆಗಳ ಘೋಷಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಎಲ್ಲಾ ಗ್ಯಾರೆಂಟಿ ಯೋಜನೆಗಳನ ಅನುಷ್ಠಾನಕ್ಕೆ ತಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿವೆ.
ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್ಲರಿಗೂ ಸುಲಭವಾಗಿ ಸಿಗುವಂತಹ ವ್ಯಕ್ತಿ. ಆದರೆ ರಾಜಮನೆತನದವರು ಹಾಗಲ್ಲ. ಜನರು ಅವರ ಸಂಪರ್ಕಕ್ಕೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಜನಪರ ಕಾಳಜಿಯಿರುವ ರಾಜಮನೆತನದವರು ತಮಗಿರುವ ಆಸ್ತಿಯಲ್ಲಿ ಅಲ್ಪ ಬಡವರಿಗೆ ಒದಗಿಸುವ ಮೂಲಕ ಜನಸೇವೆಗೆ ಮೊದಲು ಮುಂದಾಗಬೇಕಿದೆ ಎಂದರು.
ಈ ಹಿಂದೆ ಶ್ರೀಕಂಠದತ್ತ ಒಡೆಯರ್ ಅವರನ್ನು ಜನರು ತಿರಸ್ಕರಿಸಿದ್ದರು. ಅದು ಈ ಬಾರಿ ಪುನರಾವರ್ತನೆ ಆಗಲಿದೆ.
ಕೇಂದ್ರದ ಬಿಜೆಪಿ ಸರಕಾರದ ಹಲವು ಹಗರಣಗಳು ಸರಯಾಗಿ ಬೆಳಕಿಗೆ ಬಂದಿಲ್ಲ. ಪ್ರಜ್ಞಾವಂತ ಮತದಾರರು ಬಿಜೆಪಿ ಎಂಬ ಭ್ರಮೆಯಿಂದ ಹೊರಬಂದಿದ್ದಾರೆ. ಸಂವಿಧಾನ ಬದಲಾಯಿಸುವ ಚಿಂತನೆಯುಳ್ಳ ಬಿಜೆಪಿ ಮುಖಂಡರಿಂದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಬೆಂಬಲಿಸುವುದು ಅನಿವಾರ್ಯ ಎಂದರು.
Back to top button
error: Content is protected !!