ಕುಶಾಲನಗರ, ಏ 15: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ವ್ಯಾಪ್ತಿಯಲ್ಲಿ ಕಳೆದ 20 ದಿನಗಳ ಮೊದಲಿನಿಂದಲೂ ಬೀದಿ ದೀಪಗಳು ಉರಿಯದೆ ಇದ್ದು ಕಳ್ಳತನ ಪ್ರಕರಣಗಳು ನಡೆಯಲು ಅನುಕೂಲ ಉಂಟಾಗಿದೆ. ಬೀದಿ ದೀಪ ಅಳವಡಿಕೆ, ನಿರ್ವಹಣೆ ಮತ್ತು ಅದರ ದುರಸ್ಥಿ ಕಾರ್ಯವನ್ನು ಯಾರು ನಿರ್ವಹಿಸುತ್ತಿದ್ದಾರೆ, ಯಾರಿಗೆ ಟೆಂಡರ್ ನೀಡಲಾಗಿದೆ ಎಂಬುವುದು ಗೊಂದಲದ ಗೂಡಾಗಿದ್ದು, ಯಾವುದೊ ಸದಸ್ಯರ ಒತ್ತಡದ ಮೇರೆಗೆ ಹೊರ ಊರಿನ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದ್ದು ಯಾವುದೇ ರೀತಿಯ ನಿರ್ವಹಣೆಗಳ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಪುರಸಭೆ ಸದಸ್ಯ ಎಂ.ಕೆ ಸುಂದರೇಶ್ ( ದಿನೇಶ್ ) ಬೇಸರ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!